ಮನೋರಂಜನೆ

ರಾಧಿಕಾ ಆಪ್ಟೆ ಫೋಬಿಯಾ

Pinterest LinkedIn Tumblr

ರ಻ದಹಿ-fiಎಂಥ ಪಾತ್ರಕ್ಕೂ ಸೈ ಎನ್ನುವ ಜಾಯಮಾನದವರು ನಟಿ ರಾಧಿಕಾ ಆಪ್ಟೆ. ಸಣ್ಣಪುಟ್ಟ ಪಾತ್ರಗಳಿಗೆ ನ್ಯಾಯ ಸಲ್ಲಿಸುತ್ತಲೇ ಇದೀಗ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರವರು. ಇತ್ತೀಚೆಗೆ ತೆರೆಕಂಡ ‘ಮಾಂಝಿ’ ಚಿತ್ರ ಮತ್ತು ‘ಅಹಲ್ಯಾ’ ಕಿರುಚಿತ್ರದ ನಟನೆಗಾಗಿ ರಾಧಿಕಾ ಎಲ್ಲರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಎಲ್ಲ ಬಗೆಯ ಚಿತ್ರಗಳಲ್ಲಿ ನಟಿಸಬೇಕೆಂಬ ಹಂಬಲವುಳ್ಳ ಅವರೀಗ ಹಾರರ್ ಪ್ರಯತ್ನಕ್ಕೆ ಧುಮುಕಲು ರೆಡಿಯಾಗಿದ್ದಾರೆ.

ಅಂದ್ಹಾಗೆ, ಈ ಚಿತ್ರಕ್ಕೆ ‘ಫೋಬಿಯಾ’ (ಭಯ) ಎಂದು ಹೆಸರಿಡಲಾಗಿದೆ. 2011ರಲ್ಲಿ ‘ರಾಗಿಣಿ ಎಂಎಂಎಸ್’ ಚಿತ್ರ ನಿರ್ದೇಶಿಸಿ, ಪ್ರೇಕ್ಷಕನಿಗೆ ಭಯ ಹುಟ್ಟಿಸಿದ್ದ ಪವನ್ ಕೃಪಲಾನಿ ಅವರೇ ಈ ಚಿತ್ರಕ್ಕೂ ಆಕ್ಷನ್-ಕಟ್ ಹೇಳಲಿದ್ದಾರಂತೆ. ಎರೋಸ್ ಇಂಟರ್​ನ್ಯಾಷನಲ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಇದೇ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ರಾಧಿಕಾ ಖುಷಿಯಾಗಿದ್ದಾರೆ. ‘ನನಗೆ ಹಾರರ್ ಥ್ರಿಲ್ಲರ್ ಚಿತ್ರಗಳನ್ನು ನೋಡಲು ತುಂಬ ಇಷ್ಟ. ಈಗ ನಾನೇ ಅದರಲ್ಲಿ ನಟಿಸುತ್ತಿದ್ದೇನೆ’ ಎಂದು ಸಂಭ್ರಮಿಸುತ್ತಿದ್ದಾರೆ ಅವರು. ಚಿತ್ರದಲ್ಲಿ ತಾವು ನಿಭಾಯಿಸಲಿರುವ ಪಾತ್ರವೇನು ಎಂಬುದರ ಬಗ್ಗೆ ಅವರೆಲ್ಲೂ ಬಾಯಿ ಬಿಟ್ಟಿಲ್ಲ. ಇದು ‘ರಾಗಿಣಿ ಎಂಎಂಎಸ್’ ಸರಣಿಯ ಮುಂದುವರಿದ ಭಾಗವಿರಬಹುದೇ ಎಂಬೆಲ್ಲ ಅನುಮಾನಗಳೂ ಅಭಿಮಾನಿಗಳ ಮನಸ್ಸಿನಲ್ಲಿ ಹುಟ್ಟಿಕೊಂಡಿವೆ.

‘ಸೂಪರ್ ಸ್ಟಾರ್’ ರಜನಿಕಾಂತ್ ನಾಯಕತ್ವದ ‘ಕಬಲಿ’ ಚಿತ್ರಕ್ಕೆ ರಾಧಿಕಾ ನಾಯಕಿ ಎಂಬುದು ಗೊತ್ತಿರುವ ವಿಚಾರ. ಈ ನಡುವೆ ಹೊಸ ಹೊಸ ಅವಕಾಶಗಳು ಅವರಿಗೆ ಒಲಿದು ಬರುತ್ತಿವೆಯಂತೆ. ಈ ಎಲ್ಲ ಬೆಳವಣಿಗೆಗಳಿಂದ, ಸದ್ಯದಲ್ಲೇ ರಾಧಿಕಾ ಟಾಪ್ ನಟಿಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಬಹುದು ಎನ್ನುತ್ತಿದ್ದಾರೆ ಸಿನಿಪಂಡಿತರು.

Write A Comment