ಕನ್ನಡದ ವಾಯುಪುತ್ರ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ನಡುವೆ ಪ್ರೀತಿ,ಪ್ಯಾರ್,ಕಾದಲ್ ಮೊಹಬ್ಬತ್ ನಡೀತಿದೆ ಎಂಬ ಗಾಸಿಪ್ ಸುದ್ದಿಗಳು ಈ ಹಿಂದೆ ಗಾಂಧಿನಗರದಲ್ಲಿ ಹರಿದಾಡ್ತಿದ್ದವು.
ಆದರೆ ಇದೆಲ್ಲಾ ಗಾಳಿಸುದ್ದಿಗಳೆಂದು ರಾಜಾಹುಲಿಯ ಬೆಡಗಿ ಮೇಘನಾ ರಾಜ್ ಹಾಗೂ ಆಟಗಾರ ಚಿರು ಅಲ್ಲಗೆಲೆದಿದ್ದರು.
ಬಹುದಿನಗಳಿಂದ ಸ್ಯಾಂಡಲ್ ವುಡ್’ನಲ್ಲಿ ಗುಸುಪಿಸು ಸೃಷ್ಟಿಸಿದ್ದ ಈ ಸುದ್ದಿಯು ಈಗ ಮತ್ತೆ ಮರುಜೀವ ಪಡೆದುಕೊಂಡಿದೆ.
ಹೌದು..ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರಿಗೆ ಬಹುಭಾಷಾ ತಾರೆ ಮೇಘನಾ ರಾಜ್ ಕೂಡ ವಿಶ್ ಮಾಡಿದ್ದಾರೆ.
ಆದರೆ ತಮ್ಮ ಬರ್ತ್ ಡೆ ವಿಶಸ್’ನಲ್ಲಿ ಬಿಲ್(BIL) ಎಂಬ ಪದ ಸೇರಿಸುವ ಮೂಲಕ ಚಿರುವಿನೊಂದಿಗಿರುವ ಪ್ರೇಮ್ ಕಹಾನಿಯನ್ನು ಖಚಿತಪಡಿಸಿದ್ದಾರೆ.
ಚಿರು ಸಹೋದರ ‘ಧ್ರುವ’ರಿಗೆ ಮೇಘನಾ ರಾಜ್ ‘ಹ್ಯಾಪಿ ಬರ್ತ್ ಡೆ ಬಿಲ್…ಖುಷಿಖುಷಿಯಾಗಿ ಸದಾ ಇರು ಎಂದು ಟ್ವೀಟ್ ಮಾಡಿ ವಿಶಸ್ ತಿಳಿಸಿದ್ದು.
image: http://www.udayavani.com/sites/default/files/images/articles/mr.jpg
ಈ ಟ್ವೀಟ್’ನಲ್ಲಿ BIL ಎಂಬ ಪದ ಪ್ರಯೋಗಿಸಿ ಮೇಘನಾ ಚಿರುವಿನೊಂದಿಗಿನ ಲವ್ವಿಡವ್ವಿಯನ್ನು ಬಹಿರಂಗ ಪಡಿಸಿದ್ದಾರೆ.
ಬಿಲ್(BIL) ಅಂದರೆ Brother In Lawನ ಸಂಕ್ಷಿಪ್ತ ರೂಪವಾಗಿದೆ. ಧ್ರುವ ಸರ್ಜಾರನ್ನು ಮೈದುನ (BIL) ಎಂದು ಕರೆಯುವ ಮೂಲಕ ಮೇಘನಾ ಎಷ್ಟು ದಿನ ಕಾಪಾಡಿಕೊಂಡು ಬಂದ ಗುಟ್ಟು ರಟ್ಟಾಗಿಸಿದ್ದಾರೆ.
ಆಟಗಾರ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ಜೋಡಿಯು ಸ್ಯಾಂಡಲ್ ವುಡ್’ನ ಹೊಸ ತಾರಾ ದಂಪತಿಗಳಾಗಿ ಹೆಜ್ಜೆಯಿಡಲಿದ್ದಾರೆಯೇ ಎಂಬುದನ್ನು ಕಾಲವೇ ಉತ್ತರಿಸಲಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ