ಮನೋರಂಜನೆ

ಹರ್ಭಜನ್-ಗೀತಾ ಮದುವೆ ಆಮಂತ್ರಣ ಪತ್ರಿಕೆ

Pinterest LinkedIn Tumblr

hariಬಾಲಿವುಡ್ ನ ಬಹು ನಿರೀಕ್ಷಿತ ಮದುವೆಯೊಂದಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟಿಗ ಹರ್ಬಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ಇದೇ ತಿಂಗಳ 29 ರಂದು ಹಸೆಮಣೆ ಏರಲಿದ್ದಾರೆ. ಈಗಾಗಲೇ ವಿವಾಹದ ಆಮಂತ್ರಣ ರೆಡಿಯಾಗಿದ್ದು, ವಿವಾಹಕ್ಕೆ ಆಹ್ವಾನಿಸುವ ಕಾರ್ಯದಲ್ಲಿ ಇಬ್ಬರು ತೊಡಗಿದ್ದಾರೆ.

ಡಿಸೈನರ್ ಆದಿ ಸಿಂಗ್ ಅನ್ನೋರು ಈ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿದ್ದಾರೆ. ಇತ್ತ ವಧು ವರರ ವಿವಾಹ ಉಡುಪುಗಳು ಕೂಡ ರೆಡಿಯಾಗುತ್ತಿವೆ. ವಿವಾಹದ ದಿನ ಹರ್ಭಜನ್ ಸಿಂಗ್ ಶೇರ್ವಾನಿ ಧರಿಸಲಿದ್ದಾರಂತೆ.  ರಾಘವೇಂದ್ರ ರಾಥೋಡ್ ಎಂಬವರು ಹರ್ಭಜನ್ ಗೆ ಕ್ಯಾಸ್ಟ್ಯೂಮ್ ರೆಡಿ ಮಾಡುತ್ತಿದ್ದಾರಂತೆ. ಇನ್ನು ವಿವಾಹದ ದಿನ ಗೀತಾ ಗಾಗ್ರಾದಲ್ಲಿ ಮಿಂಚಲಿದ್ದಾರಂತೆ. ಇನ್ನು ವಿವಾಹ 5 ದಿನಗಳ ಕಾಲ ಭರ್ಜರಿಯಾಗಿ ನಡೆಯಲಿದೆ.

ಇನ್ನು ವಿವಾಹ ಹರ್ಭಜನ್ ತವರುನಗರ ಜಲಂಧರ್‌ನಿಂದ 20 ಕಿಮೀ ದೂರದ ಪಾಗ್ವಾರಾದ ಹೊಟೆಲ್ ಕ್ಲಬ್ ಕಬಾನಾದಲ್ಲಿ ನಡೆಯಲಿದೆ. ಬಳಿ ಮುಂಬೈನಲ್ಲಿ ಆರಕ್ಷತೆ ನಡೆಯುವ ಸಾಧ್ಯತೆಯಿದೆ. ಇನ್ನು ವಿವಾಹಕ್ಕೆ ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಯರು ಆಗಮಿಸಲಿದ್ದಾರೆ. ಹಾಗಾಗಿ ವಿವಾಹ ತಾರೆಯರ ಸಮಾಗಮಕ್ಕೆ ಸಾಕ್ಷಿಯಾಗಲಿದೆ.

Write A Comment