‘ನಿಖಾಹ್’ ಖ್ಯಾತಿಯ ಹಳೆ ತಲೆಮಾರಿನ ನಟಿ ಸಲ್ಮಾ ಆಘಾ ಹಾಗೂ ಆಕೆಯ ಮಗಳು ಸಾಶಾ ಆಘಾ ಇಬ್ರೂ ಹಿಂದಿಯ ವಿವಾದಾತ್ಮಕ ಟಿವಿ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಪಾಕಿಸ್ಥಾನ-ಬ್ರಿಟನ್ ಮಿಶ್ರ ತಳಿಯ ಈ ಹಿರಿಯ ನಟಿ ಅಂದಿನ ಕಾಲಕ್ಕೆ ದೊಡ್ಡ ಹೆಸರು. ಹಾಗೆಯೇ ಮಗಳು ಸಾಶಾ ಆಘಾ ಕೂಡ ‘ಔರಂಗಜೇಬ್’ ಚಿತ್ರದಲ್ಲಿ ಅರ್ಜುನ್ ಕಪೂರ್ ಜತೆ ನಟಿಸಿ ಹೆಸರು ಮಾಡಿದವಳು. ಈಗ ಈ ಇಬ್ಬರೂ ಹಿರಿ-ಕಿರಿ ನಟಿಯರು ಬಿಗ್‌ಬಾಸ್ ಮಹಾಮನೆಯಲ್ಲಿ ಕಾಣಿಸಿಕೊಳ್ಳುವರು ಎಂಬ ಸುದ್ದಿ ಹೊರಬಿದ್ದಿದೆ. ಈಗಾಗಲೇ ಬಿಗ್‌ಬಾಸ್ ಆಯೋಜಕರು ಅಮ್ಮ-ಮಗಳು ಇಬ್ಬರನ್ನೂ ಭೇಟಿಯಾಗಿ ಅರ್ಜಿ ಸಲ್ಲಿಸಿದ್ದಾರಂತೆ.
ಎಲ್ಲವೂ ಈ ಸುದ್ದಿಯ ಪ್ರಕಾರವೇ ನಡೆದು ಬಿಟ್ಟರೆ, ಸದ್ಯದಲ್ಲೇ ಆರಂಭವಾಗುವ ಬಿಗ್‌ಬಾಸ್‌ನಲ್ಲಿ ಅಮ್ಮ-ಮಗಳು ಖಚಿತ. ಪ್ರೇಕ್ಷಕರಿಗೆ ಇವರ ದರ್ಶನ ಉಚಿತ. ತಾಯಿ-ಮಗಳಿಬ್ಬರೂ ಶೀಘ್ರವೇ ಮಹಾಮನೆ ಸೇರಿಕೊಳ್ಳಲಿದ್ದಾರೆ. ಅಂದಹಾಗೇ ಸಾಶಾ ಗಾಯಕ ಸಚಿನ್ ಗುಪ್ತನನ್ನು ಅವರಮ್ಮನ ಅಭಿಪ್ರಾಯಕ್ಕೆ ವಿರೋಧವಾಗಿ ಮದುವೆ ಮಾಡಿಕೊಂಡು ಉದ್ದಿಯಾಗಿದ್ದು ನೆನಪಿದೆಯೇ..?