ಮನೋರಂಜನೆ

ತನ್ನ ಜೀವನಾಧಾರಿತ ಸಿನಿಮಾವನ್ನು ತಾನೇ ಸಹ ನಿರ್ಮಾಣ ಮಾಡಲಿರುವ ಸಂಜು ಬಾಬಾ

Pinterest LinkedIn Tumblr

02sanjay-dutt

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಸಂಜಯ್ ದತ್ ಒಂದು ತಿಂಗಳ ಪೆರೋಲ್ ಮೇಲೆ ಹೊರ ಬಂದಿದ್ದಾರೆ.

ಪೆರೋಲ್ ಮೇಲೆ ಹೊರಬಂದಿರುವ ಬೆನ್ನಲ್ಲೇ ಸಂಜಯ್ ದತ್ ಅಭಿಮಾನಿಗಳಿಗೊಂದು ಸಪ್ರೈಸ್ ನೀಡಿದ್ದರು. ತನ್ನ ಜೀವನಾಧಾರಿತ ಸಿನಿಮಾವನ್ನು ತಾನೇ ಸಹ ನಿರ್ಮಾಣ ಮಾಡೋದಾಗಿ ಹೇಳಿದ್ದರು. ಹಾಗಾಗಿ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿರುವಾಗಲೇ ಸಂಜಯ್ ಅಭಿಮಾನಿಗಳಿಗೊಂದು ಬೇಸರ ವಿಷಯ ತಿಳಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಂದಿನ ವರ್ಷ ಆರಂಭವಾಗಲಿದೆ ಎಂದಿದ್ದಾರೆ.

ಅಂದ್ಹಾಗೆ ಈ ಸಿನಿಮಾವನ್ನು ನಿರ್ದೇಶಿಸುತ್ತಿರೋದು ರಾಜ್ ಕುಮಾರ್ ಹಿರಾನಿ. ಮೊನ್ನೆ ಸಂದರ್ಸನವೊಂದರಲ್ಲಿ ಮಾತನಾಡಿದ ಹಿರಾನಿ ಸಂಜಯ್ ಸಿನಿಮಾದ ಸ್ಕ್ರಿಫ್ಟಿಂಗ್ ಕೆಲಸಗಳು ಈಗಾಗಲೇ ಶುರುವಾಗಿದೆ ಎಂದಿದ್ದರು. ಅಲ್ಲದೇ ಅವರು ಕೂಡ ಈ ಸಿನಿಮಾದ ಶೂಟಿಂಗ್ ಮುಂದಿನ ವರ್ಷ ನಡೆಯಲಿದೆ ಎಂದಿದ್ದಾರೆ.

ವಿದು ವಿನೋದ್ ಛೋಪ್ರಾ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸಂಜಯ್ ದತ್ ಅವರೊಂದಿಗೆ ಸಹ ನಿರ್ಮಾಪಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಸಂಜಯ್ ಪಾತ್ರವನ್ನು ರಣ್ ಬೀರ್ ಕಪೂರ್ ನಿರ್ವಹಿಸುತ್ತಿದ್ದಾರಂತೆ.

Write A Comment