ಭುವನೇಶ್ವರ, ಅ.4-ದೇಶದ ಹಲವೆಡೆ ವಿದ್ಯುತ್ ಕ್ಷಾಮದ ನಡುವೆಯೇ ಇಲ್ಲಿನ ಪುಟ್ಟ ಹಳ್ಳಿಯ ಜನರು ದೊಡ್ಡ ಸಾಧನೆ ಮಾಡಿದ್ದಾರೆ.
ಪ್ರಕೃತಿದತ್ತ ಸೂರ್ಯನ ಬೆಳಕನ್ನು ಬಳಸಿ ಸೌರವಿದ್ಯುತ್ ಉತ್ಪಾದನೆ ಮಾಡಿ ಇಡೀ ಗ್ರಾಮ 24 ಗಂಟೆ ನಿರಂತರ ವಿದ್ಯುತ್ ಜೊತೆಗೆ ಕೃಷಿಗೂ ಕೂಡ ಇದನ್ನೇ ಬಳಸಿಕೊಂಡು ಸರ್ಕಾರದ ನೆರವಿಗೆ ಕಾಯದೆ ಸ್ವಾವಲಂಬನೆ ಸಾಧಿಸಿದ್ದಾರೆ.
ಬರಾಪಾತ್ ಎಂಬ ಗ್ರಾಮ ಈಗ ಇಡೀ ರಾಜ್ಯದಲ್ಲೇ ಸೌರವಿದ್ಯುತ್ ಹೊಂದಿದ ಹಳ್ಳಿಎಂಬ ಖ್ಯಾತಿ ಪಡೆದಿದೆ.