ಮನೋರಂಜನೆ

ಯುರೋ ಅರ್ಹತಾ ಪಂದ್ಯಗಳಿಗೆ ಸ್ಟ್ರೈಕರ್ ಬಾಲೊಟೆಲ್ಲಿ ಔಟ್

Pinterest LinkedIn Tumblr

4mario-balotelli-3_BGSಮಿಲಾನ್, ಅ.4: ಎಸಿ ಮಿಲಾನ್ ಸ್ಟ್ರೈಕರ್ ಮರಿಯೊ ಬಾಲೊಟೆಲ್ಲಿ 2016ರ ಅರ್ಹತಾ ಸುತ್ತಿನ ಪಂದ್ಯಗಳಿಗೆ ಇಟಲಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಯುರೋ ಅರ್ಹತಾ ಸುತ್ತಿನ ಪಂದ್ಯಗಳಿಗೆ 27 ಮಂದಿ ಆಟಗಾರರನ್ನು ಒಳಗೊಂಡ ಇಟಲಿ ತಂಡವನ್ನು ಕೋಚ್ ಅಂಟೊನಿಯೊ ಕೊಂಟೆ ಪ್ರಕಟಿಸಿದರು.
ಬಾಲೊಟೆಲ್ಲಿ ಈ ವರ್ಷ ಮಿಲಾನ್ ಪರ ಎರಡು ಪಂದ್ಯಗಳನಷ್ಟೇ ಆಡಿದ್ದರು. ಗಾಯದ ಕಾರಣದಿಂದಾಗಿ ಬಳಿಕ ಆಡಿರಲಿಲ್ಲ. ಇದೀಗ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಬಾಲೊಟೆಲ್ಲಿ ಬದಲಿಗೆ ತಂಡದಲ್ಲಿ ಡೊಮೆನಿಕೊ ಬೆರಾರ್ಡಿ ಮೊದಲ ಬಾರಿ ಇಟಲಿ ತಂಡ ಸೇರ್ಪಡೆಗೊಂಡಿದ್ದಾರೆ. 2012ರ ಯುರೋ ಫೈನಲ್‌ನಲ್ಲಿ ಇಟಲಿ ತಂಡ ಸ್ಪೇನ್ ವಿರುದ್ಧ ಸೋಲು ಅನುಭವಿಸಿತ್ತು. ಕಳೆದ ಎರಡು ವಿಶ್ವಕಪ್‌ಗಳಲ್ಲೂ ಇಟಲಿ ಎರಡನೆ ಸುತ್ತು ತಲುಪುವಲ್ಲಿ ಎಡವಿತ್ತು.

Write A Comment