ಮನೋರಂಜನೆ

‘ಬ್ರಹ್ಮೋತ್ಸವಂ’ನಲ್ಲಿರುವ ಹಾಡೊಂದಕ್ಕಾಗಿ 3.5 ಕೋಟಿ

Pinterest LinkedIn Tumblr

bfrhಮಹೇಶ್​ಬಾಬು ಸಿನಿಮಾಗಳಲ್ಲಿ ಎಲ್ಲವೂ ರಿಚ್ ಆಗಿರಬೇಕು! ಆ ರಿಚ್​ನೆಸ್​ಗಾಗಿ ನಿರ್ವಪಕರು ಎಷ್ಟು ಹಣ ಸುರಿದರೂ ಅದು ಕಡಿಮೆಯೇ. ಕಾರಣ, ಅಭಿಮಾನಿಗಳ ನಿರೀಕ್ಷೆ ಯಾವಾಗಲೂ ಮೇರೆ ಮೀರಿರುತ್ತದೆ. ‘ಬ್ರಹ್ಮೋತ್ಸವಂ’ ಕೂಡ ಇದಕ್ಕೆ ಹೊರತಲ್ಲ.

‘ಶ್ರೀಮಂತುಡು’ ಶತಕೋಟಿ ಕ್ಲಬ್​ಗೆ ಸೇರಿ ಮನಗೆದ್ದ ಬಳಿಕ ಈಗ ಎಲ್ಲರ ಚಿತ್ತ ‘ಬ್ರಹ್ಮೋತ್ಸವಂ’ನತ್ತ ನೆಟ್ಟಿದೆ. ಜ. 15ರಂದು ಬಿಡುಗಡೆ ಘೊಷಿಸಿಕೊಂಡಿರುವ ಈ ಚಿತ್ರವನ್ನು ಎಷ್ಟು ಸಾಧ್ಯವೋ, ಅಷ್ಟು ಅದ್ದೂರಿಯಾಗಿ ರೂಪಿಸಲಾಗುತ್ತಿದೆ. ಈ ಧೋರಣೆಯ ಅನುಷ್ಠಾನಕ್ಕಾಗಿ ಬಜೆಟ್​ನ ಇತಿಮಿತಿಗಳಿಲ್ಲ. ಸದ್ಯ ಬಂದಿರುವ ಮಾಹಿತಿ ಪ್ರಕಾರ, ‘ಬ್ರಹ್ಮೋತ್ಸವಂ’ನಲ್ಲಿರುವ ಹಾಡೊಂದಕ್ಕಾಗಿ 3.5 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ!! ಇಷ್ಟು ದೊಡ್ಡ ಬಜೆಟ್​ನಲ್ಲಿ ಒಂದಿಡೀ ಚಿತ್ರವನ್ನೇ ಮಾಡಿ ಮುಗಿಸಿಬಿಡಬಹುದು, ಹಾಗಿರುವಾಗ ಒಂದೇ ಹಾಡಿಗಾಗಿ ಯಾಕೆ ದುಂದುವೆಚ್ಚ ಮಾಡುತ್ತಿದ್ದಾರೆ? ಇವರೇನು ಸ್ವರ್ಗವನ್ನೇ ಧರೆಗೆ ಎಳೆದು ತರುತ್ತಾರಾ? ನೀವು ಹೀಗೆ ಕೇಳುವಂತಿಲ್ಲ.

‘ಏಕೈಕ ಹಾಡಿಗಾಗಿ ಮೂರುವರೆ ಕೋಟಿ ರೂ. ಸುರಿಯುತ್ತಿರುವುದು ಹೆಚ್ಚುಗಾರಿಕೆಗಾಗಿ ಅಲ್ಲ’ ಎಂದು ಮೊದಲಿಗೆ ಸ್ಪಷ್ಟಪಡಿಸುತ್ತದೆ ಚಿತ್ರತಂಡ. ‘ಇದು ಸಿನಿಮಾದ ಆರಂಭದಲ್ಲಿ ಬರುವ ಮದುವೆ ಹಾಡು. ಮಹೇಶ್​ಬಾಬು ಈ ಹಾಡಿನ ಮೂಲಕವೇ ಎಂಟ್ರಿ ಕೊಡುತ್ತಾರೆ. ಅವರ ಜತೆ 500 ಮಂದಿ ಸಹ ಕಲಾವಿದರು ಸ್ಟೆಪ್ಸ್ ಹಾಕಿದ್ದಾರೆ. ಸಮಂತಾ, ಕಾಜಲ್ ಅಗರ್​ವಾಲ್, ಪ್ರಣೀತಾ, ಜಯಸುಧಾ, ಸಯ್ಯಾಜಿ ಶಿಂಧೆ, ತನಿಕೆಳ್ಳ ಭರಣಿ, ನರೇಶ್, ಕೃಷ್ಣ ಭಗವಾನ್… ಹೀಗೆ ಪ್ರಮುಖ ಕಲಾವಿದರ ದಂಡೇ ಹಾಡಿನಲ್ಲಿ ಕುಣಿದಿದೆ. ಕಥೆಗೆ ಪೂರಕವಾಗಿ ಅದ್ದೂರಿಯಾಗಿಯೇ ಸೆರೆಹಿಡಿದಿದ್ದೇವೆ. ಹಾಡಿಗಾಗಿ ಹಿಂದೆಂದೂ ಕಾಣದ ಸೆಟ್​ಗಳನ್ನು ಹಾಕಿದ್ದೇವೆ’ ಎನ್ನುತ್ತವೆ ಮೂಲಗಳು. ಹಾಡಿನ ರಿಚ್​ನೆಸ್​ಗಾಗಿ ದುಬಾರಿ ಸೆಟ್​ಗಳನ್ನು ಹಾಕಲಾಗಿದೆಯಂತೆ.

‘ಬ್ರಹ್ಮೋತ್ಸವಂ’ ತಮಿಳು- ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ವಣವಾಗುತ್ತಿದೆ. ತಮಿಳಿನಲ್ಲಿ ಸ್ವತಃ ಮಹೇಶ್​ಬಾಬು ಡಬ್ಬಿಂಗ್ ಮಾಡಲಿದ್ದಾರಂತೆ. ನಾಳೆಯಿಂದ (ಅ. 5) ಚಿತ್ರದ 2ನೇ ಹಂತದ ಶೂಟಿಂಗ್ ಶುರು.

Write A Comment