ಸೌಂದರ್ಯ ಜಗದೀಶ್ ನಿರ್ಮಾಣದ “ರಾಮ್-ಲೀಲಾ’ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಅಮೂಲ್ಯ ನಾಯಕ-ನಾಯಕಿಯಾಗಿ ನಟಿಸಿದ್ದು, ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ನಟ ದರ್ಶನ್ “ರಾಮ್‌ಲೀಲಾ’ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. “ಟ್ರೇಲರ್ ನೋಡುತ್ತಿದ್ದಂತೆ ಚಿತ್ರತಂಡದ ಶ್ರಮ ಗೊತ್ತಾಗುತ್ತದೆ. ಚಿತ್ರದ ಬಗ್ಗೆ ನಿರೀಕ್ಷೆ ಇದ್ದು, ಚಿತ್ರ ಹಿಟ್ ಆಗಲಿ’ ಎನ್ನುವ ಮೂಲಕ ಚಿತ್ರತಂಡಕ್ಕೆ ಬೆನ್ನು ತಟ್ಟಿದ್ದಾರೆ. ಚಿತ್ರವನ್ನು ವಿಜಯಕಿರಣ್ ನಿರ್ದೇಶಿಸಿದ್ದಾರೆ.
ಈಗಾಗಲೇ “ಮಸ್ತ್ ಮಜಾ ಮಾಡಿ’, “ಅಪ್ಪು-ಪಪ್ಪು’ ಹಾಗೂ “ಸ್ನೇಹಿತರು’ ಚಿತ್ರಗಳನ್ನು ನಿರ್ಮಿಸಿರುವ ಸೌಂದರ್ಯ ಜಗದೀಶ್ ಈಗ “ರಾಮ್‌ಲೀಲಾ’ ಚಿತ್ರ ನಿರ್ಮಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಹಾಗೂ ವಿದೇಶಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದು, ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. “ರಾಮ್‌ಲೀಲಾ’ ಲವ್ ಕಮ್ ಆ್ಯಕ್ಷನ್ ಸಿನಿಮಾವಾಗಿದ್ದು, ಮೊದಲ ಬಾರಿಗೆ ಚಿರಂಜೀವಿ ಸರ್ಜಾ ಹಾಗೂ ಅಮೂಲ್ಯ ಈ ಚಿತ್ರದ ಮೂಲಕ ಒಂದಾಗಿದ್ದಾರೆ. ಚಿತ್ರದಲ್ಲಿ ಸಂಜನಾ, ಸಾಧು ಕೋಕಿಲ, ರಂಗಾಯಣ ರಘು, ರವಿ ಕಾಳೆ, ಚಿಕ್ಕಣ್ಣ, ರವಿಶಂಕರ್ ಗೌಡ ನಟಿಸಿದ್ದಾರೆ.
-ಉದಯವಾಣಿ,