ಅಂತರಾಷ್ಟ್ರೀಯ

ಇರಾನ್ ಮಹಿಳಾ ತಂಡದಲ್ಲಿ ಆಡುತ್ತಿರುವ 11 ಮಂದಿ ಆಟಗಾರರಲ್ಲಿ 8 ಮಂದಿ ಪುರುಷರು !

Pinterest LinkedIn Tumblr

iran football team

ಟೆಹರಾನ್: ಅಂತಾರಾಷ್ಟ್ರೀಯ ಫುಟ್‍ಬಾಲ್‍ನಲ್ಲಿ ಹಲವು ಅವಾಂತರ ಮಾಡಿರುವ ಇರಾನ್ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಇರಾನ್ ಮಹಿಳಾ ತಂಡದಲ್ಲಿ ಆಡುತ್ತಿರುವ 11 ಮಂದಿ ಆಟಗಾರರಲ್ಲಿ 8 ಮಂದಿ ಪುರುಷರೇ ಇದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇರಾನ್ ಫುಟ್ಬಾಲ್ ಲೀಗ್‍ಗೆ ಸಂಬಂಧಪಟ್ಟ ಅಧಿಕಾರಿಯೊಬ್ಬರು ವೆಬ್‍ಸೈಟ್‍ಗೆ ನೀಡಿದ ಸಂದರ್ಶನದಲ್ಲಿ ಈ ಅಂಶವನ್ನು ಬಯಲಾಗಿದೆ. 8 ಮಂದಿ ಆಟಗಾರರು ಲಿಂಗ ಬದಲಾವಣೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳೋಕೆ ರೆಡಿಯಾಗಿದ್ದು, ಈಗಾಗಲೇ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ.

ಇರಾನ್‍ನಲ್ಲಿ ಲಿಂಗ ಬದಲಾವಣೆಗೆ ಅವಕಾಶವಿದೆ. ಅಂಥವರು ರಾಷ್ಟ್ರೀಯ ತಂಡದಲ್ಲೂ ಆಡಬಹುದು 2014ರಲ್ಲಿ 4 ಮಂದಿ ಪುರುಷ ಆಟಗಾರರು ಮಹಿಳೆಯರಾಗಿ ಲಿಂಗ ಬದಲಾವಣೆ ಮಾಡಿಕೊಂಡು ಆಡಿದ್ದರು ಎನ್ನುವ ಸಂಶಯ ಬಂದಿತ್ತು. ಆದರೆ ಈಗ ಎಂಟು ಮಂದಿ ಲಿಂಗ ಪರಿವರ್ತನೆ ಮಾಡುವ ಮುನ್ನವೇ ಪಂದ್ಯ ಆಡಿರುವುದು ವಿವಾದಕ್ಕೆ ಕಾರಣವಾಗಿದೆ.

Write A Comment