ಕನ್ನಡ ವಾರ್ತೆಗಳು

ಬ್ರಹ್ಮಾವರ: ಮೀನು ಸಾಗಣಿಕೆ ಲಾರಿ ಹಾಗೂ ಬಸ್ಸು ಡಿಕ್ಕಿ; ಯುವತಿ ಸಾವು- ಹಲವರಿಗೆ ಗಾಯ

Pinterest LinkedIn Tumblr

ಉಡುಪಿ: ಮೀನು ಸಾಗಣಿಕೆ ಲಾರಿ ಹಾಗೂ ಖಾಸಗಿ ಬಸ್‌‌‌ ನಡುವೆ ನಡೆದ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಯುವತಿ ಸ್ಥಳದಲ್ಲೇ ಮತಪಟ್ಟ ಘಟನೆ ಬ್ರಹ್ಮಾವರ ಸಮೀಪದ ಮಾಬುಕಳದಲ್ಲಿ ಶನಿವಾರ ನಡೆದಿದೆ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.

ಬ್ರಹ್ಮಾವರ ನಿವಾಸಿ ಮೆರಿಟಾ ಡಿಸಿಲ್ವಾ (23) ಮೃತ ಯುವತಿ. ಇವರು ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಉದ್ಯೋಗಿಯಾಗಿದ್ದಾರೆ. ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Bramhavara_Accident_Merita Death (4) Bramhavara_Accident_Merita Death (1) Bramhavara_Accident_Merita Death (7) Bramhavara_Accident_Merita Death (8) Bramhavara_Accident_Merita Death (3) Bramhavara_Accident_Merita Death (6) Bramhavara_Accident_Merita Death (2) Bramhavara_Accident_Merita Death (5)

ಉಡುಪಿಯಿಂದ ಕುಂದಾಪುರದತ್ತ ಸಾಗುತ್ತಿದ್ದ ಮೀನು ಸಾಗಣಿಕೆಯ ಲಾರಿ ಇದಾಗಿದ್ದು ಮಾಬುಕಳದ ಬಸ್ಸು ನಿಲ್ದಾಣದಲ್ಲಿ ನಿಲ್ಲಿಸಿದ್ದ ವೇಳೆ ್ಮೀನಿನ ಲಾರಿ ವೇಗವಾಗಿ ಬಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ.ಿದರಿಂದ ಬಸ್ಸಿನಲ್ಲಿದ್ದ ಮೆರಿಟಾ ಅವರು ಗಂಭೀರವಾಗಿ ಗಾಯಗೊಂಡಿದ್ದು ಹಲವರು ಗಾಯಗೊಂಡಿದ್ದಾರೆ. ಮೆರಿಟಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ ಮಾರ್ಗಮಧ್ಯೆಯೇ ಆಕೆ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Write A Comment