ಧರ್ಮಶಾಲಾ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೊದಲ ಟಿ-20 ಪಂದ್ಯದಲ್ಲಿ 7 ವಿಕೆಟ್‍ಗಳಿಂದ ಸೋತಿದ್ದಕ್ಕೆ ನಾಯಕ ಧೋನಿ ಅಂಪೈರ್‍ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ, ಕೆಲವೊಂದು ನಿರ್ಧಾರಗಳು ನಮ್ಮ ಪರವಾಗಿ ಬಾರದ ಕಾರಣ ನಮಗೆ ಒತ್ತಡ ಹೆಚ್ಚಾಯಿತು. ನಾವು ಜಯದ ಹತ್ತಿರ ಬಂದಿದ್ದೇವು. 20ನೇ ಓವರ್ ಎಸೆಯುವ ಸಂದರ್ಭದಲ್ಲಿ ನಮ್ಮ ಒತ್ತಡ ತುಂಬಾ ಹೆಚ್ಚಿತ್ತು ಎಂದು ಹೇಳಿದ್ದಾರೆ.
ನಾವು ನೀಡಿದ ಗುರಿ ಸವಾಲಿನದ್ದಾಗಿತ್ತು. ಮಧ್ಯದ ಓವರ್ ತುಂಬಾ ನಿರ್ಣಾಯಕವಾಗಿತ್ತು. ಆದರೆ ಈ ವೇಳೆ ಬಂದ ನಿರ್ಧಾರಗಳಿಂದಾಗಿ ಬೌಲರ್‍ಗಳ ಮೇಲೆ ಒತ್ತಡ ಹೆಚ್ಚಾಯಿತು ಎಂದು ಅವರು ಹೇಳಿದರು.
ಭುವನೇಶ್ವರ್ ಕುಮಾರ್ ಎಸೆದ 17ನೇ ಓವರ್‍ನಲ್ಲಿ ಡ್ಯುಮಿನಿ ಎಲ್‍ಬಿಡಬ್ಲ್ಯೂ ಆಗಿ ಔಟಾಗುವ ಸಾಧ್ಯತೆಯಿತ್ತು. ಆದರೆ ಅಂಪೈರ್ ಭಾರತದ ಎಲ್‍ಬಿಡಬ್ಲ್ಯೂ ಮನವಿಯನ್ನು ತಿರಸ್ಕರಿಸಿದ್ದರು.
ಭಾರತ 5 ವಿಕೆಟ್‍ಗೆ 199 ರನ್ ಗಳಿಸಿದ್ದರೆ, ದಕ್ಷಿಣ ಆಫ್ರಿಕಾ ಡ್ಯುಮಿನಿ ಅವರ ಅಜೇಯ ಸಾಹಸದಿಂದಾಗಿ ಒನ್ನು 2 ಬಾಲ್ ಇರುವಂತೆಯೇ ವಿಜಯದ ಗುರಿಯನ್ನು ಮುಟ್ಟಿತ್ತು.
