ಮನೋರಂಜನೆ

ಟೈಟ್ಲು ಚಿತ್ರದಲ್ಲಿ ನಿರ್ಮಾಪಕರ ನಟನೆ

Pinterest LinkedIn Tumblr

pro-fiಈಚೀಚೆಗೆ ನಿರ್ಮಾಪಕರೂ ಮುಖಕ್ಕೆ ಬಣ್ಣ ಹಚ್ಚಿ ಅಭಿನಯಿಸುವುದು ಹೆಚ್ಚಾಗುತ್ತಿದೆ. ತಮ್ಮದೇ ನಿರ್ವಣದ ಚಿತ್ರಗಳಲ್ಲದೇ, ಅನ್ಯರ ಸಿನಿಮಾಗಳಲ್ಲೂ ಕೆಲ ನಿರ್ದೇಶಕ, ನಿರ್ಮಾಪಕರು ತಮ್ಮ ನಿಜರೂಪ ಪ್ರದರ್ಶಿಸಿದ ಉದಾಹರಣೆಗಳಿವೆ. ‘ಟೈಟ್ಲು ಬೇಕಾ’ ಇದಕ್ಕೆ ನೂತನ ಕೂಡಿಕೆ. ಹಿರಿಯ ನಿರ್ಮಾಪಕ  ಸಾ.ರಾ. ಗೋವಿಂದು, ಚಿನ್ನೇಗೌಡ್ರು ಹಾಗೂ ಟೇಶಿ ವೆಂಕಟೇಶ್ ಅವರು ‘ಟೈಟ್ಲು’ನಲ್ಲಿ ತಮ್ಮ ನಿಜ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ.

ಅರ್ಥಾತ್, ಸಾ.ರಾ. ಗೋವಿಂದು, ಚಿನ್ನೇಗೌಡ್ರು ರಿಯಲ್ ಲೈಫ್​ನಲ್ಲೂ ನಿರ್ವಪಕರು ಈಗ ರೀಲ್​ನಲ್ಲೂ ನಿರ್ಮಾಪಕರಾಗಿಯೇ ಹಾಗೂ ಟೀಶಿ ವೆಂಕಟೇಶ್ ನಿರ್ದೇಶಕರಾಗಿ ನಟಿಸಿದ್ದಾರೆ. ಹಾಗಂತ ಇದು ಸಿನಿಮಾದೊಳಗಿನ ಸಿನಿಮಾ ಕಥೆ ಅಂತ ಭಾವಿಸಬೇಕಿಲ್ಲ. ಸಣ್ಣದ್ದೊಂದು ಸಿನಿಮಾ ಲಿಂಕ್ ಇರುತ್ತೆ. ಆ ದೃಶ್ಯದಲ್ಲಿ ಈ ಮೂವರು ಬಂದು ಹೋಗುತ್ತಾರೆ ಎಂದು ವಿವರ ಕೊಡುತ್ತಾರೆ

ನಿರ್ದೇಶಕ ಆನಂದ್. ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುವ ನವ ನಿರ್ದೇಶಕರಿಗೆ ಸಾಮಾನ್ಯವಾಗಿ ನಿರ್ಮಾಪಕರು ಹೇಳುವ ಡೈಲಾಗ್​ಗಳನ್ನೇ ಸಿನಿಮಾದಲ್ಲೂ ಈ ಮೂವರು ಹೇಳುವುದು ವಿಶೇಷ ಎಂದು ಹೇಳಿಕೊಳ್ಳಲು ಮರೆಯುವುದಿಲ್ಲ ಅವರು. ಅದೇನೇ ಇರಲಿ, ಮೊದಲ ಬಾರಿಗೆ ಗೋವಿಂದು, ಚಿನ್ನೇಗೌಡ್ರು ಮತ್ತು ಟೇಶಿ ಅವರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿ ಚಿತ್ರೀಕರಿಸಿದ ಹೆಮ್ಮೆಯಂತೂ ಆನಂದ್ ಅವರಿಗಿದೆ.

ಇನ್ನೊಂದು ವಿಷಯ, ‘ಇವಳ್ಯಾರೋ ಇವಳ್ಯಾರೋ…’ ಎಂಬ ಹಾಡನ್ನು ಪಾಕಿಸ್ತಾನ ಗಡಿಯ ಚಂದ್ರತಾಲ್ ಎಂಬ ಸೂಕ್ಷ್ಮ ಪ್ರದೇಶದಲ್ಲಿ ‘ಟೈಟ್ಲು’ ಚ್ರಿತತಂಡ ಈಚೆಗೆ ಚಿತ್ರೀಕರಿಸಿಕೊಂಡು ಬಂದಿದೆ.

Write A Comment