ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 146ನೇ ಜಯಂತಿಯನ್ನು ನಾವಿಂದು ಆಚರಿಸುತ್ತಿದ್ದೇವೆ. ಸತ್ಯ, ಶಾಂತಿ, ಅಹಿಂಸೆಯನ್ನು ಜಗತ್ತಿಗೆ ಸಾರಿ ನುಡಿದಂತೆ ನಡೆದ ಮೋಹನ್ ದಾಸ್ ಕರಮ ಚಂದ ಗಾಂಧಿಯವರ ಬಗ್ಗೆ ನಿಮಗೆ ತಿಳಿದಿರ ಕೆಲವೊಂದು ಸಂಗತಿಗಳು ಇಲ್ಲಿವೆ…
ಮಹಾತ್ಮಾ ಗಾಂಧಿಯವರ ಹೆಸರನ್ನು 5 ಬಾರಿ ನೋಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿತ್ತು.
ಮಾತೃಭಾಷೆ ಗುಜರಾತಿಯ ಮೇಲೆ ಗಾಂಧೀಜಿಯವರಿಗೆ ಹೆಚ್ಚಿನ ಅಭಿಮಾನವಿತ್ತು. ಅವರ ಆತ್ಮಕಥೆಯನ್ನು ಗುಜರಾತಿಯಲ್ಲೇ ಬರೆದಿದ್ದರು. ನಂತರ ಅದನ್ನು ಇಂಗ್ಲೀಷ್ ಗೆ ಅನುವಾದ ಮಾಡಲಾಯಿತು.
ಗಾಂಧಿಯವರು ಮಿತವಾದ ಆಹಾರವನ್ನೇ ಸೇವಿಸುತ್ತಿದ್ದರು. ಆಡಿನ ಹಾಲು ಮತ್ತು ಹಣ್ಣು ಹಂಪಲುಗಳೇ ಅವರ ಆಹಾರವಾಗಿತ್ತು.
4 ಭೂಖಂಡಗಳಲ್ಲಿ ಮತ್ತು 12 ದೇಶಗಳಲ್ಲಿ ಮಾನವ ಹಕ್ಕುಗಳ ಚಳುವಳಿಗೆ ಪ್ರೇರಣೆ ನೀಡಿದ್ದರು ಗಾಂಧಿ.
ಅವರಿಗೆ ಫೋಟೋಗೆ ಪೋಸ್ ಕೊಡುವುದು ಇಷ್ಟವಿರಲಿಲ್ಲ. ಆದರೆ ಗಾಂಧೀಜಿಯವರ ಫೋಟೋಗಾಗಿ ಪತ್ರಕರ್ತರು ಮುಗಿ ಬೀಳುತ್ತಿದ್ದರು.
ಅಷ್ಟೊಂದು ಜನಪ್ರಿಯರಾಗಿದ್ದರೂ ಗಾಂಧಿ ಯಾವತ್ತೂ ವಿಮಾನದಲ್ಲಿ ಪ್ರಯಾಣಿಸಿರಲಿಲ್ಲ.
ಗಾಂಧಿ ದಿನಾ ಸುಮಾರು 18 ಕಿಮೀ ನಡೆಯುತ್ತಿದ್ದರು.
ಅವರ ಕೈ ಬರಹ ತುಂಬಾ ಕೆಟ್ಟದಾಗಿತ್ತು. ಈ ಬಗ್ಗೆ ಸ್ವತಃ ಗಾಂಧಿಯೇ ಬೇಸರ ಮಾಡಿಕೊಂಡಿದ್ದರು.
ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧಿ. ಅದೇ ಬ್ರಿಟನ್ ಗಾಂಧಿ ವಿಧಿವಶರಾಗಿ 21 ವರ್ಷಗಳ ನಂತರ ಗಾಂಧಿಯವರಿಗೆ ಗೌರವ ಸಲ್ಲಿಸಿ ಅಂಚೆ ಚೀಟಿ ಬಿಡುಗಡೆ ಮಾಡಿತ್ತು.
ಬೋಯೆರ್ ಯುದ್ಧ ಕಾಲದಲ್ಲಿ ಗಾಂಧಿ ಸೈನ್ಯದಲ್ಲಿ ಕೆಲಸ ಮಾಡಿದ್ದರು. ಯುದ್ಧದ ಕರಾಳತೆಯನ್ನು ಹತ್ತಿರದಿಂದ ಕಂಡ ನಂತರ ಅವರು ಅವರು ಅಹಿಂಸೆಯ ಹಾದಿ ತುಳಿದರು.
ಗಾಂಧಿಯವರು ಟಾಲ್ ಸ್ಟಾಯ್, ಐನ್ ಸ್ಟೀನ್ ಹಿಟ್ಲರ್ ಮೊದಲಾದವರೊಂದಿಗೆ ಪತ್ರ ಸಂವಹನ ನಡೆಸುತ್ತಿದ್ದರು.
ಸ್ವಾತಂತ್ರ್ಯ ಸಿಕ್ಕಿದ ನಂತರ ಮೊದಲ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಿದಾಗ ಗಾಂಧಿಯವರು ಅಲ್ಲಿರಲಿಲ್ಲ. ಅವರು ಆಗ ಕೊಲ್ಕತ್ತಾದಲ್ಲಿ ನಡೆಯುತ್ತಿದ್ದ ಕೋಮು ಗಲಭೆಯನ್ನು ತಡೆಯಲು ಉಪವಾಸ ನಿರತರಾಗಿದ್ದರು.
ಮಧುರೈನ ಗಾಂಧಿ ಮ್ಯೂಸಿಯಂ ನಲ್ಲಿ ಗಾಂಧಿಯವರು ತೊಟ್ಟ ಬಟ್ಟೆಗಳನ್ನು ಸಂಗ್ರಹಿಸಿಡಲಾಗಿದೆ
ಗಾಂಧಿ ರಾಜಕೀಯ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಪಕ್ಷದ ಅಧಿಕಾರ ಅಥವಾ ಹುದ್ದೆಯನ್ನು ನಿರ್ವಹಿಸಿರಲಿಲ್ಲ.
ಸ್ಟೀವ್ ಜಾಬ್ ಮಹಾತ್ಮಾ ಗಾಂಧಿಯವರ ಅನುಯಾಯಿ. ಆದ್ದರಿಂದಲೇ ಅವರು ಗಾಂಧಿ ಕನ್ನಡಕವನ್ನು ಧರಿಸಿ ಗಾಂಧಿಗೆ ಗೌರವ ಸೂಚಿಸಿದ್ದರು.
ಗಾಂಧಿಯವರು ನಕಲಿ ಹಲ್ಲುಗಳನ್ನು ಬಳಸುತ್ತಿದ್ದರು.ಅವರ ಹಲ್ಲಿನ ಸೆಟ್ ನ್ನು ಬಟ್ಟೆಯಲ್ಲಿ ಸುತ್ತಿ ಇಟ್ಟುಕೊಳ್ಳುತ್ತಿದ್ದರು.
ಐರಿಶ್ ಶೈಲಿಯಲ್ಲೇ ಗಾಂಧಿ ಇಂಗ್ಲಿಷ್ ಮಾತನಾಡುತ್ತಿದ್ದರು. ಯಾಕೆಂದರೆ ಅವರ ಮೊದಲ ಶಿಕ್ಷಕ ಐರಿಶ್ ಆಗಿದ್ದ.
ಮಹಾತ್ಮಾ ಗಾಂಧಿಯವ ಅಂತ್ಯ ಸಂಸ್ಕಾರದ ಮೆರವಣಿಗೆ ಸುಮಾರು 8 ಕಿ.ಮೀ ಉದ್ದವಿತ್ತು.
ಭಾರತದಲ್ಲಿ ಗಾಂಧಿಯವರ ಹೆಸರಿರುವ 53 ಪ್ರಮುಖ ರಸ್ತೆಗಳಿವೆ.ಭಾರತದ ಹೊರಗೆ ಸುಮಾರು 48 ರಸ್ತೆಗಳಿಗೆ ಗಾಂಧಿಯವರ ಹೆಸರನ್ನಿಡಲಾಗಿದೆ.
ಡರ್ಬಾನ್, ಪ್ರೆಟೋರಿಯಾ ಮತ್ತು ಜೊಹಾನ್ಸ್ ಬರ್ಗ್ ನಲ್ಲಿ 3 ಪುಟ್ಬಾಲ್ ಕ್ಲಬ್ ಗಳನ್ನು ಸ್ಥಾಪನೆ ಮಾಡಲು ಗಾಂಧಿ ನೆರವಾಗಿದ್ದರು. ಆ ಮೂರು ಕ್ಲಬ್ ಗಳ ಹೆಸರು ಪ್ಯಾಸಿವ್ ರೆಸಿಸ್ಟರ್ಸ್ ಸೋಕರ್ಸ್ ಕ್ಲಬ್
ನಾಳೆಯೇ ಇಲ್ಲ ಎಂಬಂತೆ ಇವತ್ತು ಬದುಕಬೇಕು. ನನ್ನ ಜೀವನವೇ ನನ್ನ ಸಂದೇಶ ಎಂದು ಜಗತ್ತಿಗೆ ಶಾಂತಿ, ಸತ್ಯ, ಅಹಿಂಸೆಯನ್ನು ಸಾರಿದವರು ಗಾಂಧಿ.