ಮನೋರಂಜನೆ

ಮಹಿಳೆಯರ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸಾನಿಯಾ ಜೋಡಿ

Pinterest LinkedIn Tumblr

Sania

ವೂಹಾನ್(ಪಿಟಿಐ): ಚೀನಾದಲ್ಲಿ ನಡೆಯುತ್ತಿರುವ ವೂಹಾನ್ ಡಬ್ಲ್ಯುಟಿಎ ಮಹಿಳೆಯರ ಓಪನ್ ಟೆನಿಸ್ ಟೂರ್ನಿಯಲ್ಲಿ ಇಂಡೋ-ಸ್ವಿಸ್ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಗುರುವಾರ ಸೆಮಿಫೈನಲ್ ಪ್ರವೇಶಿಸಿದೆ.

ಅಗ್ರ ಶ್ರೇಯಾಂಕದ ಜೋಡಿ ಕ್ವಾರ್ಟರ್ ಫೈನಲ್ ನಲ್ಲಿ ಐದನೇ ಶ್ರೇಯಾಂಕದ ಅಮೆರಿಕದ ಜೋನ್ಸ್ ಮತ್ತು ಅಬಿಗೈಲ್ ಸ್ಪಿಯರ್ಸ್ ಜೋಡಿಯನ್ನು 6-2, 6-2ರಲ್ಲಿ ಸೋಲಿಸಿ ಸೆಮಿಫೈನಲ್ ಗೆ ಮುನ್ನಡೆ ಸಾಧಿಸಿತು.

ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ವಿಂಬಲ್ಡನ್ ಗೆದ್ದ ಬಳಿಕ, ಮಿಯಾಮಿ ಓಪನ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತ್ತು.

Write A Comment