ಮನೋರಂಜನೆ

ರಂಗಿತರಂಗಕ್ಕೆ ಶತದಿನೋತ್ಸವ

Pinterest LinkedIn Tumblr

rangi-fiಗಾಂಧಿನಗರದಲ್ಲಿ ‘ಶತದಿನೋತ್ಸವ’ ಎಂಬುದು ತೀರಾ ಅಪರೂಪದ ಪದವಾಗಿ ಮಾರ್ಪಟ್ಟು ಅನೇಕ ದಿನಗಳಾಗಿವೆ. ಇತ್ತೀಚೆಗಂತೂ ಸ್ಟಾರ್ ಸಿನಿಮಾಗಳೇ ನೆಲೆಕಚ್ಚಿದ ಉದಾಹರಣೆಗಳು ಬೇಕಾದಷ್ಟಿವೆ. ಪರಿಸ್ಥಿತಿ ಹೀಗಿರುವಾಗ ಹೊಸಬರ ಚಿತ್ರವೊಂದು 100 ಡೇಸ್ ಸಂಭ್ರಮ ಆಚರಿಸಿಕೊಳ್ಳುವುದು ಸುಲಭದ ಮಾತಲ್ಲ. ‘ರಂಗಿತರಂಗ’ ಅಂಥ ಸಂಭ್ರಮದ ಕ್ಷಣಗಳನ್ನು ಎದುರು ನೋಡುತ್ತಿದೆ. ಸರಿಯಾಗಿ ಅ. 10ಕ್ಕೆ ‘ರಂಗಿ…’ ಸೆಂಚುರಿ ಬಾರಿಸಲಿದೆ!

ಈ ವರ್ಷ ಬಿಡುಗಡೆಗೊಂಡ ಚಿತ್ರಗಳ ಪೈಕಿ, ಇದುವರೆಗೆ ನೂರರ ಗಡಿ ಮುಟ್ಟಿರುವುದು ‘ಕೃಷ್ಣಲೀಲಾ’ ಮಾತ್ರ. 2ನೇ ಸ್ಥಾನ, ‘ರಂಗಿತರಂಗ’ಕ್ಕೆ. ಇದು ಗಾಂಧಿನಗರದ ಮಟ್ಟಿಗಿನ ಸಾಧನೆಯಾದರೆ, ವಿದೇಶಗಳಲ್ಲೂ ‘ತರಂಗ’ ಮೂಡಿಸಿರುವುದು ನಿರ್ದೇಶಕ ಅನೂಪ್ ಭಂಡಾರಿ ತಂಡದ ಹೆಚ್ಚುಗಾರಿಕೆ. ಇದುವರೆಗೂ ಅಲ್ಲೊಂದು ಇಲ್ಲೊಂದು ಸ್ಟಾರ್ ಚಿತ್ರಗಳು ವಿದೇಶಿ ಪರದೆಗಳಲ್ಲಿ ತೆರೆಕಾಣುತ್ತಿದ್ದವು. ಇದೀಗ ಕೇವಲ ತೆರೆಕಾಣುವುದಷ್ಟೇ ಅಲ್ಲ, ಗಳಿಕೆಯಲ್ಲೂ ‘ರಂಗಿತರಂಗ’ ಮುಂದಿವೆ. ಅಮೆರಿಕದಲ್ಲಿ ಅರ್ಧಶತಕ ಬಾರಿಸಿರುವ (57ನೇ ದಿನ) ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ‘ರಂಗಿತರಂಗ’ ಪಾತ್ರವಾಗಿದೆ. ಇದೇ ಖುಷಿಗೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಅಥವಾ ಬಹಿರಂಗ ಸ್ಥಳದಲ್ಲಿ ಶತದಿನೋತ್ಸವದ ಸಮಾರಂಭ ಮಾಡುವ ಉದ್ದೇಶ ಹೊಂದಿರು ವುದಾಗಿ ತಿಳಿಸುತ್ತಾರೆ ನಿರ್ವಪಕ ಪ್ರಕಾಶ್.

ಹಣಕಾಸಿನ ವಿಚಾರದಲ್ಲೂ ‘ರಂಗಿ…’ ಹಿಂದೆ ಬಿದ್ದಿಲ್ಲ. ಅಮೆರಿಕ ಮಾತ್ರವಲ್ಲದೆ, ಆಸ್ಟ್ರೇಲಿಯಾ, ಸಿಂಗಾಪುರ, ಇಂಗ್ಲೆಂಡ್, ಮಲೇಷ್ಯಾ, ಬ್ಯಾಂಕಾಕ್ ಮುಂತಾದೆಡೆ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಪರಿಣಾಮ, ನಿರ್ವಪಕರ ಮೊಗದಲ್ಲಿ ನಗು ಮೂಡಿದೆ.

ಅಮೆರಿಕ ಒಂದರಿಂದಲೇ 2 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿದೆಯಂತೆ! ಅಂದ್ಹಾಗೆ, ಈ ಗಳಿಕೆ ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ (6 ಲಕ್ಷ ರೂ.) ಮತ್ತು ‘ಉಪ್ಪಿ 2’ (26 ಲಕ್ಷ ರೂ.) ಚಿತ್ರಗಳಿಗಿಂತಲೂ ಅಧಿಕ ಎಂಬುದು ವಿಶೇಷ.

Write A Comment