ಮನೋರಂಜನೆ

ಜಸ್ಬಾ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಐಶ್ಚರ್ಯಾ

Pinterest LinkedIn Tumblr

ish‘‘ನಿಜಜೀವನದಲ್ಲಿ ತಾಯಿಯಾಗಿದ್ದು ‘ಜಸ್ಬಾ’ ಚಿತ್ರದಲ್ಲಿ ಪಾತ್ರವನ್ನು ಹೆಚ್ಚು ನೈಜವಾಗಿ ನಿರ್ವಹಿಸಲು ಸಹಾಯವಾಯಿತು’’ ಎಂದು ಬಾಲಿವುಡ್‌ ಬೆಡಗಿ ಐಶ್ಚರ್ಯಾ ರೈ ಬಚ್ಚನ್‌ ಹೇಳಿದ್ದಾರೆ.

‘ಜಸ್ಬಾ’ ಚಿತ್ರದ ಮೂಲಕ ಐದು ವರ್ಷಗಳ ನಂತರ ಐಶ್ವರ್ಯಾ ರೈ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ನಾನು ನಿಜಜೀವನದಲ್ಲಿ ತಾಯಿಯಾಗಿದ್ದು, ಈ ಚಿತ್ರದ ಪಾತ್ರಕ್ಕೆ ಪೂರ್ತಿಯಾಗಿ ಹೊಂದಿಕೊಳ್ಳಲು ನೆರವಾಯಿತು. ಯಾವುದೇ ಭಾವನಾತ್ಮಕ ಸನ್ನಿವೇಶಕ್ಕೆ ನೀವು ನಿಮ್ಮ ನೈಜ ಅನುಭವದಿಂದ ವಾಸ್ತವಿಕ ಸ್ಪರ್ಶ ನೀಡಬಹುದಾಗಿದೆ.

ಸಿನಿಮಾದಲ್ಲಿನ ದೃಶ್ಯಗಳಲ್ಲಿ ಪೂರ್ತಿ ತನ್ಮಯತೆ ಸಾಧಿಸಲು ಸಾಧ್ಯವಾಗುತ್ತದೆ. ನಿಜ ಜೀವನದಲ್ಲಿ ತಾಯಿಯಾದ ಅನುಭವ ಈ ಸಿನಿಮಾದಲ್ಲಿನ ನನ್ನ ಪಾತ್ರದ ಪ್ರಾಮಾಣಿಕತೆಯನ್ನು ಹೆಚ್ಚಿಸಿದೆ’ ಎಂದು ಐಶ್ವರ್ಯಾ ‘ಜಸ್ಬಾ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Write A Comment