ಮನೋರಂಜನೆ

‘ಪುಲಿ’ ಸಿನೆಮಾ ಬಿಡುಗಡೆಯ ಮುನ್ನ ದಿನ ಶಾಕ್ ನೀಡಿದ ಐಟಿ: ನಟ ವಿಜಯ್, ಸಮಂತಾ, ನಯನತಾರಾ ಮನೆ ಸೇರಿದಂತೆ 32 ಕಡೆ ದಾಳಿ

Pinterest LinkedIn Tumblr

vijay

ಚೆನ್ನೈ: ಬಿಡುಗಡೆಗೆ ಸಿದ್ಧವಾಗಿರುವ ‘ಪುಲಿ’ ಚಿತ್ರದ ನಾಯಕ ನಟ ವಿಜಯ್, ನಟಿಯರಾದ ಸಮಂತಾ ಹಾಗೂ ನಯನತಾರಾ ಅವರ ನಿವಾಸ ಸೇರಿದಂತೆ 32ಕಡೆ ಆದಾಯ ತೆರಿಗೆ ಇಲಾಖೆ ಬುಧವಾರ ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದೆ.

ವಿಜಯ್ ಅವರ ಪುಲಿ ನಾಳೆ ತೆರೆಗೆ ಬರುತ್ತಿದ್ದು, ತೆರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೂ ಮುನ್ನಾ ದಿನವೇ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶಾಕ್ ನೀಡಿದ್ದಾರೆ.

ವರದಿಗಳ ಪ್ರಕಾರ, ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ಹೂಡಿಕೆಗಳ ಬಗ್ಗೆ ವಿವರಣೆ ನೀಡಿಲ್ಲ. ಹೀಗಾಗಿ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಸೇರಿ ಚೆನ್ನೈ, ಹೈದರಾಬಾದ್, ಮದುರೈ ಹಾಗೂ ಕೊಚ್ಚಿನ್ನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

‘ಪುಲಿ’ ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ಚಿಂಬು ದೇವನ್‌ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಸುದೀಪ್‌ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

Write A Comment