ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಗೆಳೆತನ ಎಂದೋ ಮುಕ್ತಾಯ ಕಂಡ ಅಧ್ಯಾಯ. ಆದರೂ ಕೆಲವೊಮ್ಮೆ ಇಬರಿಬ್ಬರ ಹೆಸರು ಸುದ್ದಿಯ ಅಂಗಣದಲ್ಲಿ ಓಡಾಡುತ್ತದೆ. ಸದ್ಯ ‘ಬಿಗ್ ಬಾಸ್’ನ 9ನೇ ಆವೃತ್ತಿಗೆ ಚಾಲನೆ ನೀಡುವುದಕ್ಕೆ ಸಲ್ಮಾನ್ ಸಿದ್ಧರಾಗಿದ್ದಾರೆ.
ಅದಕ್ಕೂ ಮುಂಚೆ ಮಾಧ್ಯಮಗಳ ಮುಂದೆ ಬಂದ ಸಲ್ಲೂಗೆ ಒಂದಷ್ಟು ಪ್ರಶ್ನೆಗಳು ಎದುರಾಗಿದೆ. ‘ನಿಮ್ಮ ಕಾರ್ಯಕ್ರಮಕ್ಕೆ ‘ಜಝ್ಬಾ’ ಚಿತ್ರದ ಪ್ರಚಾರಕ್ಕಾಗಿ ಐಶ್ವರ್ಯಾ ಬರುತ್ತಾರಾ’ ಎಂದು ಕೇಳಿದ್ದಕ್ಕೆ ಸಲ್ಲೂ ಉತ್ತರವೇನು ಗೊತ್ತಾ? ‘ಎಂಥ ಎಮೋಷನಲ್ ಪ್ರಶ್ನೆ ಕೇಳಿಬಿಟ್ಟೀರಿ’!
ಸಲ್ಮಾನ್ ಮತ್ತು ಐಶ್ವರ್ಯಾ ಬಹುಕಾಲ ಪ್ರೇಮಿಗಳಾಗಿ ಓಡಾಡಿಕೊಂಡಿದ್ದರು. ಆದರೆ ಸಲ್ಮಾನ್ ನಡೆಯಿಂದಾಗಿ ಇಬ್ಬರ ಪ್ರಣಯ ಗೀತೆ ಅರ್ಧಕ್ಕೆ ಮೊಟಕುಗೊಂಡಿತ್ತು. ನಂತರ ಐಶೂ ಅಭಿಷೇಕ್ ಬಚ್ಚನ್ ಅವರನ್ನು ವರಿಸಿ ಬಚ್ಚನ್ ಕುಟುಂಬದ ಸೊಸೆಯಾದರು. ವಯಸ್ಸು 50 ಆದರೂ ಅದ್ಯಾಕೋ ಸಲ್ಮಾನ್ ಮಾತ್ರ ವಿವಾಹ ಬಂಧನಕ್ಕೆ ಸಿಲುಕದೇ ಒಂಟಿ ಜೀವನ ಕಳೆಯುತ್ತಿದ್ದಾರೆ.