ಮನೋರಂಜನೆ

ದಂಗಲ್ ನಲ್ಲಿ ಆಮಿರ್ ಪತ್ನಿಯಾಗಲಿಲ್ಲ ಮಲ್ಲಿಕಾ ಶೆರಾವತ್ !

Pinterest LinkedIn Tumblr

mallika-fiಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಅವರಿಗೆ ಬಾಲಿವುಡ್​ನಲ್ಲಿ ಬೇಡಿಕೆ ಕಮ್ಮಿಯಾಗಿ ಬಹಳ ದಿನಗಳೇ ಆದವು. ಈ ವರ್ಷ ತೆರೆಕಂಡ ಅವರ ನಟನೆಯ ‘ಡರ್ಟಿ ಪಾಲಿಟಿಕ್ಸ್’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ನೆಲಕಚ್ಚಿದ ನಂತರವಂತೂ ಅವರನ್ನು ಕೇಳುವವರೇ ಗತಿ ಇಲ್ಲ ಎಂಬಂತಾಗಿದೆ. ಈ ಮಧ್ಯೆ ಹೇಗಾದರೂ ಮಾಡಿ ಚಾನ್ಸ್ ಗಿಟ್ಟಿಸಬೇಕೆಂಬ ಹಠದಿಂದ ಆಮಿರ್ ಖಾನ್ ನಾಯಕತ್ವದ ‘ದಂಗಲ್’ ಚಿತ್ರದ ಆಡಿಷನ್​ನಲ್ಲಿ ಮಲ್ಲಿಕಾ ಭಾಗವಹಿಸಿದ್ದರಂತೆ! ಆದರೆ ಆ ಪ್ರಯತ್ನವೂ ಫಲ ನೀಡಿಲ್ಲ. ಕಾರಣ, ವಯಸ್ಸು!!

ಅರೆರೆ, ಮಲ್ಲಿಕಾಗೆ ಅಷ್ಟೊಂದು ವಯಸ್ಸಾಗಿದೆಯಾ ಅಂತ ಯೋಚಿಸಬೇಡಿ. ಈಗಾಗಲೇ ಬಹಿರಂಗಗೊಂಡಿರುವಂತೆ, ನಾಲ್ಕು ಮಕ್ಕಳ ತಂದೆಯಾಗಿ ಆಮಿರ್ ಕಾಣಿಸಿಕೊಳ್ಳುತ್ತಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ 38ರ ಪ್ರಾಯದ ಮಲ್ಲಿಕಾ ಅವರನ್ನು ನಾಲ್ಕು ಮಕ್ಕಳ ತಾಯಿಯಂತೆ ಕಲ್ಪಿಸಿಕೊಳ್ಳಲು ಚಿತ್ರತಂಡಕ್ಕೆ ಸಾಧ್ಯವಾಗಲಿಲ್ಲ! ಆಮಿರ್ ಕೂಡ ‘ಅಮ್ಮನ ಪಾತ್ರಕ್ಕೆ ನೀವು ಹೊಂದಿಕೆಯಾಗಲ್ಲ’ ಎಂದುಬಿಟ್ಟಿದ್ದಾರಂತೆ! ಪರಿಣಾಮ, ‘ದಂಗಲ್’ನಲ್ಲಿ ನಟಿಸುವ ಮಲ್ಲಿಕಾ ಆಸೆಗೆ ತಣ್ಣೀರು. ಹಾಗಂತ ಅವರೇನೂ ತಲೆಕೆಡಿಸಿಕೊಂಡಿಲ್ಲ. ‘ನಿಮಗಿನ್ನೂ ವಯಸ್ಸು ಕಮ್ಮಿ’ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದ್ದನ್ನೇ ಮೆಚ್ಚುಗೆ ಎಂಬಂತೆ ಭಾವಿಸಿರುವ ಅವರು, ಹೋದಲ್ಲೆಲ್ಲ ಅದನ್ನೇ ಪ್ರಸ್ತಾಪಿಸುತ್ತಿದ್ದಾರಂತೆ!

ಮಲ್ಲಿಕಾ ಬಗ್ಗೆ ಇನ್ನೊಂದೆರಡು ಆಸಕ್ತಿಕರ ವಿಚಾರಗಳಿವೆ. ಒಂದು, ಸಾಮಾನ್ಯವಾಗಿ ಖ್ಯಾತನಾಮರು ಜನದಟ್ಟಣೆಯುಳ್ಳ ಪ್ರದೇಶಗಳಲ್ಲಿ ಒಬ್ಬೊಬ್ಬರೇ ತಿರುಗಾಡುವುದಿಲ್ಲ. ಆದರೆ ಮಲ್ಲಿಕಾ ಅದಕ್ಕೆಲ್ಲ ಅಂಜುವುದಿಲ್ಲ. ಅಂಥ ಜಾಗಗಳಲ್ಲಿ ತಿರುಗಾಡಬೇಕು ಎನಿಸಿದಾಗ ಯಾರಿಗೂ ಗೊತ್ತಾಗದಂತೆ ಅವರು ಬುರ್ಖಾ ಧರಿಸಿ ಓಡಾಡುತ್ತಾರಂತೆ! ಇನ್ನೊಂದು, ಮನೆಯಲ್ಲಿ ಏಕಾಂತದಲ್ಲಿದ್ದಾಗ ಹನುಮಾನ್ ಚಾಲೀಸ ಓದುತ್ತಾರಂತೆ!!

Write A Comment