ರಾಷ್ಟ್ರೀಯ

ಕ್ಯಾನ್ಸರ್ ಮುಕ್ತರಿಗೆ ಸಂತಾನಫಲ ಸಾಧ್ಯ

Pinterest LinkedIn Tumblr

cancerನವದೆಹಲಿ: ಸಣ್ಣ ವಯಸ್ಸಿನಲ್ಲಿ ಕ್ಯಾನ್ಸರ್‍ಗೆ ತುತ್ತಾಗಿ ಚಿಕಿತ್ಸೆಯ ಪರಿಣಾಮದಿಂದ ತಂದೆ ತಾಯಿ ಯಾಗುವ ಭಾಗ್ಯವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದವರ ಬದುಕಿನಲ್ಲಿ ಈಗ ಹೊಸ ಆಶಾಕಿರಣ ಮೂಡಿದೆ. ವೀರ್ಯ ಮತ್ತು ಅಂಡಾಣುಗಳ ಫ್ರೀಜಿಂಗ್ ಟೆಕ್ನಿಕ್ ಬಳಸುವ ಮೂಲಕ ಕ್ಯಾನ್ಸರ್‍ಪೀಡಿತರಿಗೂ ಮಕ್ಕಳನ್ನು ಹೊಂದುವ ಸಾಮಥ್ರ್ಯ ಒದಗಲಿದೆ.

ಈ ಬಗ್ಗೆ ಮಂಗಳವಾರ `ಮೈಲ್ ಟುಡೇ’ ವರದಿ ಮಾಡಿದೆ. ಪಾಶ್ಚಾತ್ಯದೇಶಗಳಲ್ಲಿ ಈಗಾಗಲೇ ಪ್ರಚಲಿತವಾಗುತ್ತಿರುವ ಈ ಸೌಲಭ್ಯ ಭಾರತಕ್ಕೂ ಕಾಲಿಟ್ಟಿದ್ದು, ಕೀಮೋಥೆರಪಿ ಮತ್ತು ರೇಡಿಯೋಥೆರಪಿ ಚಿಕಿತ್ಸೆಗಳಿಂದ ಅಂಡಾಣು ಮತ್ತು ವೀರ್ಯಾಣುಗಳ ಮೇಲೆ ಯಾವುದೇ ಪರಿಣಾಮವಾಗದಂತೆ ಈ ತಂತ್ರಜ್ಞಾನ ಕಾಪಾಡಲಿದೆ.

ಕ್ಯಾನ್ಸರ್ ಪೀಡಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದರಿಂದ, ಕ್ಯಾನ್ಸರ್ ಗುಣಪಡಿಸುವು ದೂ ಸಾಧ್ಯವಿರುವುದರಿಂದ, ಗುಣ ಮುಖರಾದವರು ಸಂತಾನಹೀನರಾಗ ಬಾರದೆಂಬ ಆಶಯದಲ್ಲಿ ಟಿಶ್ಯೂ ಸಂರಕ್ಷಣೆ ತಂತ್ರಜ್ಞಾನ ಭಾರತಕ್ಕೆ ತರಲಾಗಿದೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯೆ ಡಾ.ಅಲಕಾ ಕೃಪಲಾನಿ ತಿಳಿಸಿದ್ದಾರೆ.

Write A Comment