ಮನೋರಂಜನೆ

ದೀಪಿಕಾಗೆ ಲೆಕ್ಕಾಚಾರ ಗೊತ್ತಿಲ್ಲ!

Pinterest LinkedIn Tumblr

deepika-fiಅತಿಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟಿಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಹೆಸರು ಮುಂಚೂಣಿಯಲ್ಲಿದೆ. ಆದರೆ ಎಷ್ಟು ಎಂಬ ಲೆಕ್ಕಾಚಾರ ಎಲ್ಲಿಯೂ ಹೊರಬೀಳುವುದಿಲ್ಲ ಅಷ್ಟೇ. ಅವರು ಪಡೆಯುವ ಕೋಟಿ ಕೋಟಿ ರೂ. ಸಂಭಾವನೆಯನ್ನು ಹೇಗೆಲ್ಲ ಖರ್ಚು ಮಾಡುತ್ತಾರೆ? ಹೀಗೊಂದು ಕುತೂಹಲಭರಿತ ಪ್ರಶ್ನೆ ಎಲ್ಲರಿಗೂ ಇದ್ದೇ ಇರುತ್ತೆ. ಅಚ್ಚರಿಯ ವಿಷಯವೇನೆಂದರೆ ಸ್ವತಃ ದೀಪಿಕಾ ಬಳಿಯೂ ಈ ಪ್ರಶ್ನೆಗೆ ಉತ್ತರವಿಲ್ಲ!!

ಹೌದು, ದೀಪಿಕಾಗೆ ಮೊದಲಿನಿಂದಲೂ ಹಣಕಾಸು ವ್ಯವಹಾರಗಳನ್ನು ನಡೆಸಿದ ಅಭ್ಯಾಸವಿಲ್ಲವಂತೆ. ಇದೇ ಕಾರಣಕ್ಕೋ ಏನೋ ಚಿಕ್ಕವಳಿದ್ದಾಗ ಅವರಿಗೆ ಪಾಕೆಟ್ ಮನಿ ಕೂಡ ಸಿಗುತ್ತಿರಲಿಲ್ಲವಂತೆ. ಇದೀಗ ಹತ್ತಾರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅವರಿಗೆ ದೊಡ್ಡ ಪ್ರಮಾಣದಲ್ಲೇ ಆದಾಯ ಬರುತ್ತಿದೆ. ಹಾಗಿದ್ದರೂ ಅದನ್ನು ಎಲ್ಲಿ, ಹೇಗೆ, ಎಷ್ಟು ವಿನಿಯೋಗಿಸಬೇಕು ಎಂಬುದರ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲವಂತೆ. ಹಾಗಾಗಿ ಆ ಕೆಲಸಗಳನ್ನೆಲ್ಲ ತಂದೆ ಪ್ರಕಾಶ್ ಪಡುಕೋಣೆ ನೋಡಿಕೊಳ್ಳುತ್ತಾರಂತೆ. ‘ಎಲ್ಲ ಹಣವನ್ನು ತಂದೆಗೆ ಕೊಡುತ್ತೇನೆ. ಅದನ್ನು ಅವರು ಸರಿಯಾಗಿ ನಿರ್ವಹಿಸುತ್ತಾರೆ. ನನಗೆ ಲೆಕ್ಕಾಚಾರವೆಲ್ಲ ತಿಳಿಯುವುದಿಲ್ಲ’ ಎಂದು ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ ದೀಪಿಕಾ.

Write A Comment