ಮನೋರಂಜನೆ

ಸುನಿಲ್ ಶೆಟ್ಟಿ ಪುತ್ರಿ ಆಥಿಯಾಗೆ ಕರಣ್ ಜೋಹರ್ ಚಿತ್ರದಲ್ಲಿ ಚಾನ್ಸ್?

Pinterest LinkedIn Tumblr

atiya-fiಈಗ ತಾನೇ ಬಣ್ಣದ ಜಗತ್ತಿನಲ್ಲಿ ಪಯಣ ಶುರುವಿಟ್ಟುಕೊಂಡಿದ್ದಾರೆ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ. ಕಳೆದ ವಾರ ತೆರೆಕಂಡಿರುವ ಅವರ ನಟನೆಯ ‘ಹೀರೋ’ ಚಿತ್ರ ಹೇಳಿಕೊಳ್ಳುವಂಥ ಗಳಿಕೆ ಕಂಡಿಲ್ಲ. ಸಲ್ಮಾನ್ ಖಾನ್ ನಿರ್ವಣದ ಈ ಚಿತ್ರ ತಯಾರಾಗಿರುವುದು 28 ಕೋಟಿ ರೂ. ಬಜೆಟ್​ನಲ್ಲಿ. ನಾಲ್ಕು ದಿನಕ್ಕೆ 24.13 ಕೋಟಿ ರೂ. ಗಳಿಸುವ ಮೂಲಕ ಗೆಲುವಿಗೆ ಹತ್ತಿರುವಾಗುತ್ತಿದೆ ‘ಹೀರೋ’. ಸೋಲು-ಗೆಲುವಿನ ಮಾತು ಒತ್ತಟ್ಟಿಗಿರಲಿ, ಮೊದಲ ಚಿತ್ರದಿಂದಾಗಿ ಆಥಿಯಾಗೆ ಬಂಪರ್ ಚಾನ್ಸ್ ಸಿಕ್ಕಿದೆ ಎನ್ನುತ್ತಿವೆ ಮೂಲಗಳು. ಏನದು? ಕರಣ್ ಜೋಹರ್ ನಿರ್ವಣದ ಮುಂದಿನ ಚಿತ್ರದಲ್ಲಿ ನಟನೆ!

ಈಗಾಗಲೇ ಕೆಲವು ಚಿತ್ರಕಥೆಗಳು ಆಥಿಯಾ ಕೈ ಸೇರಿವೆಯಂತೆ. ಅವುಗಳಲ್ಲಿ ಕರಣ್ ಜೋಹರ್ ನಿರ್ವಿುಸಲಿರುವ ಚಿತ್ರದ ಸ್ಕ್ರಿಪ್ಟ್ ಕೂಡ ಒಂದು. ಅವುಗಳಲ್ಲಿ ಅವರು ಯಾವುದಕ್ಕೆ ‘ಓಕೆ’ ಎನ್ನುತ್ತಾರೋ ಆ ಚಿತ್ರ ಮೊದಲು ಸೆಟ್ಟೇರಲಿದೆಯಂತೆ. ಕರಣ್ ನೀಡಿರುವ ಸ್ಕ್ರಿಪ್ಟ್ ಓದಿ ಕೊಂಚ ಎಕ್ಸೈಟ್ ಆಗಿರುವ ಆಥಿಯಾ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಗಳು ದಟ್ಟವಾಗಿವೆಯಂತೆ. ಆ ಪ್ರಾಜೆಕ್ಟ್ ಬಗ್ಗೆ ಎಲ್ಲಿಯೂ ಬಾಯಿಬಿಡದಂತೆ ತಂಡದ ಎಲ್ಲ ಸದಸ್ಯರಿಗೂ ಸೂಚನೆ ನೀಡಲಾಗಿದೆಯಂತೆ. ಇಷ್ಟೆಲ್ಲ ಗುಸುಗುಸು ಹರಿದಾಡುತ್ತಿದ್ದರೂ ಆಥಿಯಾ ಆಗಲಿ, ಕರಣ್ ಆಗಲಿ ಯಾವುದನ್ನೂ ಸ್ಪಷ್ಟಪಡಿಸುವ ಗೋಜಿಗೆ ಹೋಗಿಲ್ಲ.

ಒಂದು ವೇಳೆ ಈ ಮಾತು ನಿಜವೇ ಆಗಿದ್ದರೆ, ಆಥಿಯಾಗೆ ಅದೃಷ್ಟ ಒಲಿದಂತೆಯೇ ಸರಿ. ಯಾಕೆಂದರೆ, ಮೊದಲ ಚಿತ್ರದಲ್ಲಿಯೇ (ಸ್ಟೂಡೆಂಟ್ ಆಫ್ ದ ಈಯರ್) ಕರಣ್ ಜತೆ ಕೆಲಸ ಮಾಡಿದ ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರ, ವರುಣ್ ಧವನ್ ಅವರ ಸಿನಿಭವಿಷ್ಯ ಇದೀಗ ಸುಂದರವಾಗಿದೆ. ಅದೇ ಸಾಲಿಗೆ ಆಥಿಯಾ ಕೂಡ ಸೇರುತ್ತಾರೆ ಎಂಬುದು ಸಿನಿಮಂದಿ ವಾದ.

Write A Comment