ಮನೋರಂಜನೆ

ಭಾರತ -ದಕ್ಷಿಣ ಆಫ್ರಿಕ ಕ್ರಿಕೆಟ್ ಸರಣಿ: ಗಮನ ಸೆಳೆಯಲಿರುವ ಸ್ಟಾರ್ ಆಟಗಾರರು

Pinterest LinkedIn Tumblr

3viratಹೊಸದಿಲ್ಲಿ, ಸೆ.28: ಭಾರತ ವಿರುದ್ಧದ ಸರಣಿಯನ್ನಾಡಲು ಪ್ರವಾಸಿ ದಕ್ಷಿಣ ಆಫ್ರಿಕ ತಂಡ ಭಾರತಕ್ಕೆ ಆಗಮಿಸಿದೆ. 72 ದಿನಗಳ ಪ್ರವಾಸದಲ್ಲಿ ದಕ್ಷಿಣ ಆಫ್ರಿಕ ತಂಡ 3 ಭಾರತದ ವಿರುದ್ಧ ಟ್ವೆಂಟಿ -20 ಪಂದ್ಯ, 5 ಏಕದಿನ ಮತ್ತು 4 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿದೆ. ಉಭಯ ತಂಡಗಳಲ್ಲಿರುವ ಸ್ಟಾರ್ ಆಟಗಾರರ ಪರಿಚಯ ಇಲ್ಲಿದೆ.

ಎಫ್‌ಡು ಪ್ಲೆಸಿಸ್: ದಕ್ಷಿಣ ಆಫ್ರಿಕ ಟ್ವೆಂಟಿ-20 ತಂಡದ ನಾಯಕರಾಗಿರುವ ಎಫ್ ಡು ಪ್ಲೆಸಿಸ್‌ಗೆ ಭಾರತದ ವಾತಾವರಣ ಅಪರಿಚಿತವಲ್ಲ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿರುವ ಪ್ಲೆಸಿಸ್, ಭಾರತ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ.

ಇತ್ತೀಚೆಗೆ ಫಿಟ್‌ನೆಸ್ ಸಮಸ್ಯೆಯಿಂದ ಪ್ಲೆಸಿಸ್ ಹೊರ ಬಂದಿದ್ದಾರೆ. ದಕ್ಷಿಣ ಆಫ್ರಿಕ ತಂಡ ಇವರನ್ನು ಅತಿಯಾಗಿ ಅವಲಂಬಿಸಿದೆ.

ಟೆಸ್ಟ್ :22, ರನ್ 1,495, ಶತಕ 7, ಅರ್ಧಶತಕ 7, ಏಕದಿನ ಪಂದ್ಯ 77, ರನ್ 2,453, ಶತಕ 4, ಅರ್ಧಶತಕ 16, ಟ್ವೆಂಟಿ -20 ಪಂದ್ಯ 24: ರನ್ 805, ಶತಕ 1, ಅರ್ಧಶತಕ 6.

ಇಮ್ರಾನ್ ತಾಹಿರ್: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರ 36ರ ಹರೆಯದ ಇಮ್ರಾನ್ ತಾಹಿರ್‌ಗೆ ಭಾರತದ ಪಿಚ್ ಸ್ಥಿತಿಗತಿ ಚೆನ್ನಾಗಿ ಗೊತ್ತಿದೆ. ಪಾಕಿಸ್ತಾನ ಮೂಲದ ಸ್ಪಿನ್ ಬೌಲರ್ ಇಮ್ರಾನ್ ಭಾರತದ ದಾಂಡಿಗರನ್ನು ಕಾಡಲಿದ್ದಾರೆ. ಟೆಸ್ಟ್ : 16, 109 ರನ್, ವಿಕೆಟ್ 43, ಏಕದಿನ :44, ರನ್ 65, ವಿಕೆಟ್ 77, ಟ್ವೆಂಟಿ -20: 16, ವಿಕೆಟ್ 25.

ವಿರಾಟ್ ಕೊಹ್ಲಿ: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ದಲ್ಲಿ ಮೊದಲ ಬಾರಿ ಭಾರತ ತಂಡವನ್ನು ಮುನ್ನಡೆಸಿ ಯಶಸ್ವಿಯಾಗಿದ್ದಾರೆ. ಲಂಕಾ ನೆಲದಲ್ಲಿ ಭಾರತದ 22 ವರ್ಷಗಳ ಸರಣಿ ಗೆಲುವಿನ ಬರ ನಿವಾರಿಸಿದ್ದಾರೆ. 26ರ ಹರೆಯದ ಕೊಹ್ಲಿ ಅವರಿಗೆ ಇದೀಗ ತವರಿನಲ್ಲಿ ಹೊಸ ಪರೀಕ್ಷೆ ಕಾದಿದೆ. ಟೆಸ್ಟ್ :37, ರನ್ 2,794, ಶತಕ 11, ಅರ್ಧಶತಕ 11, ಏಕದಿನ : 161, ಶತಕ 22, ಅರ್ಧಶತಕ 33, ರನ್ 6,586. ಟ್ವೆಂಟಿ-20: 28, ರನ್ 972, ಅರ್ಧಶತಕ 9.

ರವಿಚಂದ್ರನ್ ಅಶ್ವಿನ್: ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಲಂಾದ ವಿರುದ್ಧದ ಸರಣಿಯಲ್ಲಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯುತ್ತಮ ಫಾರ್ಮ್ ನಲ್ಲಿರುವ 29ರ ಹರೆಯದ ಅಶ್ವಿನ್ ಇದೀಗ ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯಲ್ಲೂ ಅದೇ ಪ್ರದರ್ಶನ ಮುಂದುವರಿಸುವ ಯೋಜನೆಯಲ್ಲಿದ್ದಾರೆ.

ಟೆಸ್ಟ್: 28, ರನ್ 1,103, ಶತಕ 2, ಅರ್ಧಶತಕ 5, ವಿಕೆಟ್ 145. ಏಕದಿನ :99, ರನ್ 657, ಅರ್ಧಶತಕ 1, ವಿಕೆಟ್ 139, ಟ್ವೆಂಟಿ -20 ಪಂದ್ಯ 26, ರನ್ 55, ವಿಕೆಟ್ 25.

Write A Comment