ಮನೋರಂಜನೆ

ಮಕ್ಕಳನ್ನು ನೋಡಿ ಪ್ರತಿಯೊಬ್ಬರೂ ಕಲಿಯುವುದು ಸಾಕಷ್ಟಿದೆ : ಅಮಿತಾಭ್ ಬಚ್ಚಬ್

Pinterest LinkedIn Tumblr

amitabhತಾವು ಹಿರಿಯರೆಂಬ ಹಮ್ಮು-ಬಿಮ್ಮುಗಳನ್ನು ದೂರ ಇಟ್ಟು ಪುಟ್ಟ ಮಕ್ಕಳಲ್ಲಿರುವ ಮುಗ್ದತೆ, ಪ್ರಾಮಾಣಿಕತೆಗಳನ್ನು ಕಲಿಯುವ ಪ್ರಯತ್ನ ಮಾಡಬೇಕು. ಆಗಲೇ ಮನುಷ್ಯ ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯ…

ಹೀಗೆ ಹೇಳಿದ್ದು ಯಾರು ಗೊತ್ತಾ… ಬಿ ಟೌನ್‌ನ ಬಿಗ್ ಬ್ರದರ್ ಅಮಿತಾಬ್ ಬಚ್ಚನ್. ನಿಜಕ್ಕೂ ಮಕ್ಕಳ ಜತೆ ನಾವು ಕಳೆಯುವ ಸಮಯ ಇದೆಯಲ್ಲ… ಅದು ಅಪೂರ್ವವಾದುದು. ಪುಟ್ಟ ಮಕ್ಕಳಲ್ಲಿರುವ ಆ ಮುಗ್ಧತೆ, ಪ್ರಾಮಾಣಿಕತೆ, ಅಪ್ಯಾಯತೆಗಳನ್ನು ನೋಡಿ ಪ್ರತಿಯೊಬ್ಬನೂ ಕಲಿಯುವುದು ಸಾಕಷ್ಟಿರುತ್ತದೆ.

ಮಕ್ಕಳ ಬಳಿ ಬಿಟ್ಟರೆ ಇನ್ನೆಲ್ಲಿಯೂ ನಿಮಗೆ ಮತ್ತೆ ಅಂಥ ಅವಕಾಶ ದೊರೆಯದು. ಮಕ್ಕಳ ಮನಸುಗಳಲ್ಲಿ ಯಾವುದೇ ರೀತಿಯ ಸ್ವಾರ್ಥ, ದ್ವೇಷ ಅಸೂಯೆಗಳ ಕಲ್ಮಶ ಇರುವುದಿಲ್ಲ.

ಅವುಗಳ ಹೃದಯ ಪರಿಶುದ್ಧತೆಯಿಂದ ಮಲ್ಲಿಗೆ ಹೂವಿನಂತಿರುತ್ತವೆ ಎನ್ನುವುದು 72ರ ಹರೆಯದ ಈ ನಟ ಕಂಡುಕೊಂಡಿರುವ ಸತ್ಯ… ಖಂಡಿತಾ ಅದ್ಭುತ. ಗಾಂಧೀಜಿ, ನೆಹರು, ಕಲಾಂ ಇವರೆಲ್ಲ
ಮಾಡಿದ್ದು ಇದನ್ನೇ…

Write A Comment