ಮನೋರಂಜನೆ

ಧವನ್ ಶತಕ; ಭಾರತ ಉತ್ತಮ ಮೊತ್ತ

Pinterest LinkedIn Tumblr

KARTHIK__ಬೆಂಗಳೂರು, ಸೆ.27: ಇಲ್ಲಿ ಆರಂಭಗೊಂಡ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ‘ಎ’ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಭಾರತ‘ಎ’ ತಂಡ ಶಿಖರ್ ಧವನ್ ಶತಕ ನೆರವಿನಲ್ಲಿ ಉತ್ತಮ ಮೊತ್ತ ದಾಖಲಿಸಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಭಾರತ ’ಎ’ ತಂಡ 33 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 161 ರನ್ ಗಳಿಸಿತ್ತು. ಅರಂಭಿಕ ದಾಂಡಿಗ ಶಿಖರ್ ಧವನ್ ಔಟಾ ಗದೆ 116 ರನ್ (112ಎ, 16ಬೌ, 2ಸಿ) ಮತ್ತು ಶ್ರೇಯಸ್ ಅಯ್ಯರ್ 6 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.

ಕಳೆದ ಶ್ರೀಲಂಕಾ ಪ್ರವಾಸದ ವೇಳೆ ಗಾಯಗೊಂಡ ಭಾರತ ಟೆಸ್ಟ್ ತಂಡದಿಂದ ಹೊರಗುಳಿದಿದ್ದ ಶಿಖರ್ ಧವನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21ನೆ ಶತಕ ದಾಖಲಿಸಿದರು. ಮೊದಲ ವಿಕೆಟ್‌ಗೆ ಅಭಿನವ್ ಮುಕುಂದ್(34) ಮತ್ತು ಧವನ್ 31 ಓವರ್‌ಗಳಲ್ಲಿ 153 ರನ್‌ಗಳ ಜೊತೆಯಾಟ ನೀಡಿ ದ್ದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾ ‘ಎ’ ತಂಡ ವರುಣ್ ಆ್ಯರೊನ್ (4-45) ಮತ್ತು ಜಯಂತ್ ಯಾದವ್(4-28) ದಾಳಿಗೆ ಸಿಲುಕಿ 52.4 ಓವರ್‌ಗಳಲ್ಲಿ 228 ರನ್‌ಗಳಿಗೆ ಆಲೌಟಾಗಿತ್ತು.

ಶಬೀರ್ ರಹ್ಮಾನ್ (ಔಟಾಗದೆ 122), ಶುವಾಗತ ಹೊಮ್ (62) ಮತ್ತು ನಾಸಿರ್ ಹುಸೈನ್(32) ಸಹಾಯದಿಂದ ಬಾಂಗ್ಲಾ ದ ಸ್ಕೋರ್ 200ರ ಗಡಿ ದಾಟಿತ್ತು.

ಬಾಂಗ್ಲಾದ 6 ಮಂದಿ ಆಟಗಾರರು ಶೂನ್ಯಕ್ಕೆ ಔಟಾಗಿದ್ದ ರು. 5.3 ಒವರ್‌ಗಳಲ್ಲಿ 6 ರನ್‌ಗೆ 4 ವಿಕೆಟ್ ಕಳೆದುಕೊಂಡಿ ದ್ದ ಬಾಂಗ್ಲಾ ತಂಡ ಬಳಿಕ ಚೇತರಿಸಿಕೊಂಡಿತು. ನಾಸೀರ್ ಹುಸೈನ್(32) ಎರಡಂಕೆಯ ಸ್ಕೋರ್ ದಾಖಲಿಸಿ ತಂಡದ ಮೊತ್ತವನ್ನು 13.5 ಓವರ್‌ಗಳಲ್ಲಿ 50ಕ್ಕೆ ಏರಿಸಿ ಔಟಾದರು. ಬಳಿಕ ಶುವಾಗತ ಮತ್ತು ಶಬೀರ್ ರಹ್ಮಾನ್ ಜೊತೆಯಾಗಿ 6ನೆ ವಿಕೆಟ್‌ಗೆ 133 ರನ್‌ಗಳ ಕೊಡುಗೆ ನೀಡಿ ಸ್ಕೋರ್‌ನ್ನು 41.5 ಓವರ್‌ಗಳಲ್ಲಿ 182ಕ್ಕೆ ತಲುಪಿಸಿದರು.

Write A Comment