ಮನೋರಂಜನೆ

ಬಾಲಿವುಡ್ ನಟ ಅಮೀರ್ ಖಾನ್ ನ ‘ದಂಗಾಲ್‍’ ಸಿನೆಮಾದಲ್ಲಿ ಮಲ್ಲಿಕಾ ಶೆರಾವತ್ ಬೇಡ ಎಂದಿದ್ದೇಕೆ ?

Pinterest LinkedIn Tumblr

amir-mallika

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಸದ್ಯ ತಮ್ಮ ಮುಂದಿನ ಚಿತ್ರ ದಂಗಾಲ್‍ಗೆ ಸಿಕ್ಕಾಪಟ್ಟೆ ವರ್ಕ್‍ಔಟ್ ಮಾಡುತ್ತಿದ್ದಾರೆ. ಆದರೆ ಅಮೀರ್ ಪತ್ನಿ ಪಾತ್ರಕ್ಕೆ ಆಡಿಷನ್ ನೀಡಿದ್ದ ಮಲ್ಲಿಕಾ ಶೆರಾವತ್‍ನನ್ನು ಯಾಕೆ ಅಮೀರ್ ಬೇಡ ಎಂದಿದ್ದರು ಎಂಬುದನ್ನು ಸ್ವತಃ ಮಲ್ಲಿಕಾ ಬಹಿರಂಗಪಡಿಸಿದ್ದಾಳೆ.

ಅಮೀರ್ ಖಾನ್ ದಂಗಾಲ್ ಚಿತ್ರದಲ್ಲಿ ಮೂರು ಮಕ್ಕಳ ತಂದೆಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಪತ್ನಿ ಪಾತ್ರಕ್ಕೆ ಕಿರುತೆರೆ ನಟಿ ಸಾಕ್ಷಿ ತನ್ವಾರ್ ಆಯ್ಕೆಯಾಗಿದ್ದಾರೆ. ಆದರೆ ಪತ್ನಿ ಪಾತ್ರ ಮಾಡುವುದಕ್ಕೆ ಆಡಿಷನ್ ನೀಡಿದ್ದ ಮಲ್ಲಿಕಾಗೆ, ಅಮೀರ್ ನೀನಿನ್ನು ಚಿಕ್ಕವಳಂತೆ ಕಾಣುತ್ತಿಯಾ ಹೀಗಾಗಿ ಅಮ್ಮನ ಪಾತ್ರ ಮಾಡುವುದು ಬೇಡ ಎಂದಿದ್ದರಂತೆ.

ಹೀಗೆಂದು ಸ್ವತಃ ಮಲ್ಲಿಕಾಳೇ ತಿಳಿಸಿದ್ದು, ನಿಜಕ್ಕೂ ಅಮೀರ್ ಖಾನ್ ಹೀಗೆ ಹೇಳಿದ್ದರ ಎನ್ನುವ ಪ್ರಶ್ನೆ ಬಾಲಿವುಡ್ ಮಂದಿ ತಲೆಕೆಡಿಸಿದೆ. ಸದ್ಯ ದಂಗಾಲ್ ಚಿತ್ರದಲ್ಲಿ ಅಮೀರ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದು, ಇದೊಂದು ಫ್ಯಾಮಿಲಿ ಕುರಿತಾದ ಸಿನಿಮಾ ಇದಾಗಿದೆ.

Write A Comment