ಅಂತರಾಷ್ಟ್ರೀಯ

ಇಂದು ಮಧ್ಯ ರಾತ್ರಿಯಿಂದ ಆಕಾಶದಲ್ಲಿ ಗೋಚರಿಸಲಿದೆ ಅಪರೂಪದ ರಕ್ತಚಂದಿರ

Pinterest LinkedIn Tumblr

BLOODMOON

ನ್ಯೂಯಾರ್ಕ್: ಭಾನುವಾರ ಮಧ್ಯ ರಾತ್ರಿಯ ನಂತರ ವಿಶ್ವಾದ್ಯಂತ ರಕ್ತ ಚಂದಿರ ಗೋಚರಿಸಲಿದೆ. ಈ ಮೂಲಕ 20 ವರ್ಷಗಳ ಬಳಿಕ ಭೋಮಂಡಲದ ಕೆಂಪು ಚಂದ್ರನ ಕೌತುಕತೆಯನ್ನು ಮತ್ತೊಮ್ಮೆ ಕಾಣಬಹುದಾಗಿದೆ.

ರಕ್ತದಲ್ಲಿ ಅದ್ದಿ ತೆಗೆದಂತೆ ಪ್ರಕಾಶಮಾನವಾಗಿ, ಅಪರೂಪದ ಚಂದಿರನನ್ನು ಇಂದು ರಾತ್ರಿ ನೋಡಬಹುದಾಗಿದೆ. ಅಂಡಾಕಾರವಾಗಿ ಕಕ್ಷೆಯಲ್ಲಿ ಭ್ರಮಿಸುವ ಚಂದ್ರ, ಪರಿಪೂರ್ಣ ವೃತ್ತದಲ್ಲಿ ಭೂಮಿಯ ಸುತ್ತ ಸುತ್ತುವುದಿಲ್ಲ. ಕೆಲವೊಮ್ಮೆ ಭೂಮಿಯ ಬಳಿ, ಕೆಲವೊಮ್ಮೆ ಭೂಮಿಯಿಂದ ಅನಂತ ದೂರದಲ್ಲಿರುವ ಚಂದ್ರ ಇಂದು ಭೂಮಿಯ ಸಮೀಪಕ್ಕೆ ಬರಲಿದೆ.

ಇದೇ ವೇಳೆ ಚಂದ್ರ ಗ್ರಹಣವೂ ಇರುವುದಿಂದ ಸೂರ್ಯ ರಶ್ಮಿಗಳನ್ನು ಭೂಮಿ ತಡೆಯುತ್ತದೆ. ಓರೆ ಕಿರಣಗಳು ಚಂದ್ರನ ಮೇಲೆ ಪ್ರತಿಫಲನವಾಗುವುದರಿಂದ ಕೆಂಬಣ್ಣದಲ್ಲಿ ಚಂದ್ರ ಗೋಚರಿಸುತ್ತದೆ. ಇದಕ್ಕೆ ರಕ್ತ ಚಂದ್ರ ಗೋಚರ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಹಲವು ಮಂದಿ ವಿಶ್ವದ ಅಳಿವು ಎಂದು ಗಾಳಿ ಸುದ್ದಿ ಹರಡಿಸಿದ್ದು, ಇದನ್ನು ನಾಸಾ ತಳ್ಳಿಹಾಕಿದೆ. ಅಲ್ಲದೇ ಇದನ್ನು ಬರಿಗಣ್ಣಿನಲ್ಲೂ ನೋಡಬಹುದು ಎಂದು ನಾಸಾ ಸ್ಪಷ್ಟಪಡಿಸಿದೆ.

ಉತ್ತರ ಅಮೆರಿಕದ ಈಸ್ಟ್ ಕೋಸ್ಟ್ ನಲ್ಲಿ ರಕ್ತಚಂದಿರ ಕಾಣಿಸುತ್ತಾನೆ. ಭಾರತದಲ್ಲಿ ಈ ರಕ್ತಚಂದಿರ ಕಾಣಲು ಸಿಗದೇ ಇದ್ದರೂ ಅಂತರ್ಜಾಲಗಳಲ್ಲಿ ಇದರ ನೇರ ಪ್ರಸಾರವಾಗಲಿದೆ. ಅಲ್ಲದೇ ಈ ರಕ್ತಚಂದಿರ ಭೂಮಿಗೆ ಹತ್ತಿರದ ಕಕ್ಷೆಯಲ್ಲಿ ಸಾಗುವುದರಿಂದ ಸಾಮಾನ್ಯ ಗಾತ್ರಕ್ಕಿಂತ ಶೇ.14ರಷ್ಟು ಅಗಲ, ಶೇ.30 ರಷ್ಟು ಪ್ರಕಾಧಮಾನವಾಗಿ ಕಾಣಿಸಲಿದೆ.

Write A Comment