ಮನೋರಂಜನೆ

ಮದುವೆ ನಂತರವು ಫಾಮ್ರ್ ಕಳೆದುಕೊಳ್ಳದ ನಾಯಕಿ ಪ್ರಧಾನ ಚಿತ್ರದಲ್ಲಿ ಕರೀನಾ

Pinterest LinkedIn Tumblr

kareena-್ಇಮದುವೆಯಾದ ನಂತರವೂ ಫಾಮ್ರ್ ಕಳೆದುಕೊಳ್ಳದ ಕರೀನಾ ಕಪೂರ್​ಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಅವರ ನಟನೆಯ ‘ಬಜರಂಗಿ ಭಾಯಿಜಾನ್’ ಚಿತ್ರ ಗೆಲುವಿನ ನಗು ಬೀರಿದ್ದಾಗಿದೆ. ಇತ್ತೀಚೆಗಷ್ಟೇ ‘ಉಡ್ತಾ ಪಂಜಾಬ್’ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅಲ್ಲದೆ, ಅರ್ಜುನ್ ಕಪೂರ್ ಜತೆಗಿನ ‘ಕಿ ಆಂಡ್ ಕ’ ಚಿತ್ರಕ್ಕೂ ಅವರು ನಾಯಕಿ. ತಾಜಾ ಮಾಹಿತಿ ಪ್ರಕಾರ, ಮಹಿಳಾಪ್ರಧಾನ ಚಿತ್ರವೊಂದರಲ್ಲಿ ನಟಿಸುವ ಆಸಕ್ತಿ ತೋರಿಸಿದ್ದಾರೆ ಕರೀನಾ.

ಸದ್ಯ ಬಾಲಿವುಡ್​ನಲ್ಲಿ ಮಹಿಳಾಪ್ರಧಾನ ಚಿತ್ರಗಳ ಹವಾ ಜೋರಾಗಿದೆ. ಅದೇ ಗಾಳಿಯಲ್ಲಿ ತೂರಿಕೊಳ್ಳುವ ಯೋಜನೆ ಕರೀನಾ ಅವರದು. ಹಾಗಂತ ಅವರಿಗೆ ಆ ಬಗೆಯ ಚಿತ್ರಗಳು ಹೊಸದೇನೂ ಅಲ್ಲ. ಈ ಹಿಂದೆ ‘ಚಮೇಲಿ’, ‘ಹೀರೋಯಿನ್’ ಮತ್ತು ‘ಜಬ್ ವಿ ಮೆಟ್’ನಂಥ ನಾಯಕಿಪ್ರಧಾನ ಚಿತ್ರಗಳಲ್ಲಿ ಅವರು ನೋಡುಗನ ಮನಗೆದ್ದಿದ್ದಾರೆ. ಈ ಬಾರಿ ಅವುಗಳಿಗಿಂತ ಏನಾದರೂ ಭಿನ್ನವಾಗಿ ಮಾಡುವ ಸವಾಲು ಅವರ ಮುಂದಿದೆ. ಅಂದ್ಹಾಗೆ ಆ ಹೊಸ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶೋಯಬ್ ಮನ್ಸೂರ್ ಆಕ್ಷನ್-ಕಟ್ ಹೇಳಲಿದ್ದಾರಂತೆ.

Write A Comment