ಮನೋರಂಜನೆ

ಮಾಜಿ ಪ್ರೇಮಿ ರಣಬೀರ್ ಕಪೂರ್​ಗೆ ಅಣ್ಣ ಅಂದ್ರು ದೀಪಿಕಾ ಪಡುಕೋಣೆ!

Pinterest LinkedIn Tumblr

ran-fiರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಮಾಜಿ ಪ್ರೇಮಿಗಳೆಂಬುದು ಹಳೇ ವಿಚಾರ. ಇವರಿಬ್ಬರೂ ಜೊತೆಯಾಗಿ ನಟಿಸಿರುವ 3ನೇ ಚಿತ್ರ ‘ತಮಾಷಾ’ ಮುಂದಿನ ತಿಂಗಳು ತೆರೆಗೆ ಬರುವ ತಯಾರಿಯಲ್ಲಿದೆ. ಕಳೆದೆರಡು ವರ್ಷಗಳಿಂದ ಗೆಲುವಿಗಾಗಿ ಕಾದಿರುವ ರಣಬೀರ್, ‘ಈ ಬಾರಿ ಗೆದ್ದೇ ಗೆಲ್ಲುತ್ತೇನೆ’ ಎನ್ನುತ್ತಿದ್ದಾರೆ.

ಕಾರಣ, ದೀಪಿಕಾ ಪಡುಕೋಣೆ!

ಹೌದು. ರಣಬೀರ್ ಪ್ರಕಾರ, ದೀಪಿಕಾ ಲಕ್ಕಿ ಹುಡುಗಿ. ‘ದೀಪಿಕೆ ಜತೆ ನಟಿಸಿದ ಚಿತ್ರ ಸೋಲಲು ಸಾಧ್ಯವೇ ಇಲ್ಲ’ ಎಂಬುದು ರಣಬೀರ್ ನಂಬಿಕೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಶೀರ್ಷಿಕೆಗೆ ತಕ್ಕಂತೆ ‘ತಮಾಷೆ’ಯಾಗಿಯೇ ಕಾಣಿಸಿಕೊಂಡಿದ್ದಾರೆ ಈ ಮಾಜಿ ಪ್ರೇಮಿಗಳು. ಇವರಿಬ್ಬರ ನಡುವೆ ಈ ಪರಿ ಒಡನಾಟ ಬೆಳೆಯುತ್ತಿರುವುದನ್ನು ಕಂಡ ಅನೇಕರಿಗೆ ಕಾಡಿದ್ದು ಒಂದೇ ಅನುಮಾನ- ಮತ್ತೆ ಪ್ರೀತಿ ಚಿಗುರಿರಬಹುದೇ? ಆದರೆ ಅಂಥ ಅನುಮಾನಕ್ಕೆ ಬ್ರೇಕ್ ಹಾಕಿದ್ದಾರೆ ಡಿಪ್ಸ್. ಅದು ಕೂಡ ರಣಬೀರ್​ಗೆ ಅಣ್ಣನ ಪಟ್ಟ ಕಟ್ಟುವ ಮೂಲಕ! ಅಚ್ಚರಿ ಎನಿಸಿದರೂ ಇದು ಸತ್ಯ.

90 ದಿನಗಳ ಕಾಲ ವಾಟ್ಸ್ ಆಪ್ ಮೆಸೇಜ್ ಡಿಲೀಟ್ ಮಾಡುವಂತಿಲ್ಲ ಎಂಬ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ರಣಬೀರ್​ಗೆ ಇತ್ತೀಚೆಗೆ ಪ್ರಶ್ನಿಸಲಾಯಿತು. ‘ಯುವಕ-ಯುವತಿಯರು ಫ್ಲರ್ಟ್ ಮೆಸೇಜ್ ಕಳಿಸುವುದನ್ನು ತಡೆದಂತಾಗುತ್ತದೆ’ ಎಂದುತ್ತರಿಸಿದರು ಅವರು. ಇದರಿಂದ ಇಂಪ್ರೆಸ್ ಆದ ದೀಪಿಕಾ, ‘ಒಳ್ಳೆಯ ಸಲಹೆ ಬ್ರೋ’ ಎಂದು ಬೆನ್ನು ತಟ್ಟಿದರು. ಇಂಗ್ಲಿಷ್ ಆಡುಮಾತಿನಲ್ಲಿ ಅಣ್ಣ ಎಂಬುದಕ್ಕೆ ‘ಬ್ರೋ’ ಎಂಬ ಪದ ಬಳಸುವುದು ನಿಮಗೂ ಗೊತ್ತಿದೆ. ಆದರೆ ಇದನ್ನು ದೀಪಿಕಾ ಉದ್ದೇಶಪೂರ್ವಕವಾಗಿ ಹೇಳಿದರೋ ಅಥವಾ ಬಾಯಿತಪ್ಪಿ ಹೇಳಿದರೋ ಎಂಬುದು ಅಭಿಮಾನಿಗಳ ಪ್ರಶ್ನೆ.

Write A Comment