ಮನೋರಂಜನೆ

ನಟಿ ಅನುಷ್ಕಾ ಶೆಟ್ಟಿ ಅಭಿನಯದ ರುದ್ರಮದೇವಿ v/s ಸೈಜ್ ಝಿರೋ

Pinterest LinkedIn Tumblr

rudramma-fiನಟಿ ಅನುಷ್ಕಾ ಶೆಟ್ಟಿ ಅಭಿನಯದ ‘ರುದ್ರಮದೇವಿ’ ಚಿತ್ರ ಆಗ.. ಈಗ.. ಎಂದು ದಿನಗಣನೇ ಮಾಡುತ್ತಲೇ ಇದೆ. ಅತ್ತ ಅವರದೇ ನಟನೆಯ ‘ಸೈಜ್ ಝಿರೋ’ ಚಿತ್ರ ಕೂಡ ಕುತೂಹಲ ಹುಟ್ಟಿಸಿದೆ. ಸದ್ಯ ಎದುರಾಗಿರುವ ಸಂಕಷ್ಟವೆಂದರೆ, ಇವೆರಡು ಮಹಿಳಾಪ್ರಧಾನ ಚಿತ್ರಗಳು ಒಂದೇ ದಿನ (ಅ. 9) ತೆರೆಗೆ ಬರುತ್ತಿವೆ!

ಇಬ್ಬರು ಸ್ಟಾರ್​ಗಳ ಚಿತ್ರಗಳು ಒಂದೇ ದಿನ ರಿಲೀಸ್ ಆದರೆ ಬಾಕ್ಸ್​ಅಫೀಸ್ ಮೇಲೆ ವ್ಯತಿರಿಕ್ತ ಪರಿಣಾಮ ಖಚಿತ. ಅಂಥದ್ದರಲ್ಲಿ ಅನುಷ್ಕಾ ನಟನೆಯ 2 ಚಿತ್ರಗಳು ಏಕಕಾಲದಲ್ಲಿ ದಾಳಿಯಿಟ್ಟರೆ? ಪರಿಣಾಮ, ಈ ವಿಚಾರವಾಗಿ ಸ್ವತಃ ಅನುಷ್ಕಾ ‘ರುದ್ರಮದೇವಿ’ ತಂಡದ ಮೇಲೆ ಮುನಿಸಿಕೊಂಡಿದ್ದಾರಂತೆ! ಮಾರ್ಚ್​ನಿಂದ ಬಿಡುಗಡೆ ಮುಂದೂಡಿಕೊಂಡೇ ಬರುತ್ತಿರುವ ನಿರ್ದೇಶಕ ಕಮ್ ನಿರ್ವಪಕ ಗುಣಶೇಖರ್ ಅವರ ನಡೆ ಅನುಷ್ಕಾ ಬೇಸರಕ್ಕೆ ಕಾರಣವಂತೆ. ಹೇಳಿದ ಸಮಯಕ್ಕೆ ಸರಿಯಾಗಿ ಚಿತ್ರ ಮುಗಿಸಿಕೊಂಡು ತೆರೆಗೆ ಬರಲಿದೆ ‘ಸೈಜ್ ಝಿರೋ’. ಅನುಷ್ಕಾ ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಸಹಜವಾಗಿಯೇ ನಿರೀಕ್ಷೆ ದ್ವಿಗುಣಗೊಂಡಿದೆ. ‘ರುದ್ರಮದೇವಿ’ ನಾಲ್ಕು ಭಾಷೆಗಳಲ್ಲಿ ತೆರೆಕಂಡರೆ, ‘ಸೈಜ್ ಝಿರೋ’ ಏಕಕಾಲದಲ್ಲಿ ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಅನ್ನುವಂತೆ, ಅನುಷ್ಕಾ ಅಭಿಮಾನಿಗಳಿಗಂತೂ ಇದು ಹಬ್ಬದ ಸಮಯ!

Write A Comment