ಮನೋರಂಜನೆ

ಗ್ವಾಂಗ್‌ಝೌ ಓಪನ್ ಟೂರ್ನಿ: ಸಾನಿಯಾ-ಹಿಂಗಿಸ್ ಫೈನಲ್‌ಗೆ

Pinterest LinkedIn Tumblr

saniyಗ್ವಾಂಗ್‌ಝೌ, ಸೆ.25: ಇಂಡೋ-ಸ್ವಿಸ್ ಟೆನಿಸ್ ಜೋಡಿ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ 250,000 ಯುಎಸ್ ಡಾಲರ್ ಬಹುಮಾನ ಮೊತ್ತದ ಗ್ವಾಂಗ್‌ಝೌ ಓಪನ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಗ್ವಾಂಗ್‌ಝೌ ಇಂಟರ್‌ನ್ಯಾಶನಲ್ ಟೆನಿಸ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜೋಡಿ ಸಾನಿಯಾ ಹಾಗೂ ಮಾರ್ಟಿನಾ ಒಂದು ಗಂಟೆ ಹಾಗೂ 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಸ್ರೇಲ್-ಸ್ವೀಡನ್ ಜೋಡಿ ಜೂಲಿಯಾ ಗ್ಲುಶ್ಕೊ ಹಾಗೂ ರೆಬೆಕಾ ಪೀಟರ್ಸನ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟರು.

ಹಾಲಿ ಯುಎಸ್ ಚಾಂಪಿಯನ್ ಸಾನಿಯಾ ಹಾಗೂ ಮಾರ್ಟಿನಾ ಮೊದಲ ಸೆಟ್‌ನ್ನು ಸುಲಭವಾಗಿ ಗೆದ್ದುಕೊಂಡರು. ಎರಡನೆ ಸೆಟ್‌ನಲ್ಲಿ ಜೂಲಿಯಾ-ರೆಬೆಕಾ ತಿರುಗೇಟು ನೀಡಿದರೂ ಅದರಲ್ಲಿ ಯಶಸ್ಸು ಸಾಧಿಸಲಿಲ್ಲ. ವಿಂಬಲ್ಡನ್ ಚಾಂಪಿಯನ್ ಸಾನಿಯಾ-ಮಾರ್ಟಿನಾ ಶ್ರೇಯಾಂಕರಹಿತ ಜೋಡಿಯನ್ನು 2ನೆ ಸೆಟ್‌ನಲ್ಲೂ ಮಣಿಸಿ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಇಂಡೋ-ಸ್ವಿಸ್ ಜೋಡಿ ಸಾನಿಯಾ ಹಾಗೂ ಮಾರ್ಟಿನಾ ಪಂದ್ಯದಲ್ಲಿ ಒಟ್ಟು ಐದು ಬಾರಿ ತಪ್ಪೆಸಗಿದ್ದರು. ಸಾನಿಯಾ ಹಾಗೂ ಮಾರ್ಟಿನಾ ಗುರುವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನ್-ರೋಮಾನಿಯದ ಜೋಡಿ ಅನ್ನಾ-ಲೆನಾ ಫ್ರೀಡ್ಸಮ್ ಹಾಗೂ ಮೊನಿಕಾ ನಿಕುಲೆಸ್ಕು ಅವರನ್ನು 6-2, 6-3 ಸೆಟ್‌ಗಳಿಂದ ಮಣಿಸುವ ಮೂಲಕ ಸೆಮಿಫೈನಲ್‌ಗೆ ತಲುಪಿತ್ತು.

Write A Comment