ಮನೋರಂಜನೆ

ಆಸ್ಕರ್ ಕಟಕಟೆಯಲ್ಲಿ ಮರಾಠಿ ಕೋರ್ಟ್

Pinterest LinkedIn Tumblr

Courtಮುಂಬೈ: ಬರುವ ವರ್ಷ ನಡೆಯುವ 88ನೇ ಆಸ್ಕರ್ ಪ್ರಶಸ್ತಿಗಾಗಿ ಅತ್ಯುತ್ತಮ ವಿದೇಶಿ ಚಿತ್ರಗಳ ವಿಭಾಗದಲ್ಲಿ ಭಾರತದಿಂದ ಮರಾಠಿ ಭಾಷೆಯ ಕೋರ್ಟ್ ಚಿತ್ರ ಸ್ಪರ್ಧಿಸಲಿದೆ.

ಚೈತ್ಯನ್ಯ ತಮ್ಹಾಣೆ ನಿರ್ದೇಶನದ ಈ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ವಿಡಂಬನೆಯ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿತ್ತು.  ವಿವಿಧ ಭಾಷೆಯ 30 ದೊಡ್ಡ ಬಜೆಟ್ ನ ಚಿತ್ರಗಳು ಈ ಬಾರಿ ರೇಸ್‍ನಲ್ಲಿದ್ದವು. ಅವೆಲ್ಲವನ್ನೂ ಬದಿಗೊತ್ತಿ ಈ ಕಡಿಮೆ ವೆಚ್ಚದ ಚಿತ್ರ ಕೇವಲ ತನ್ನ ಕಥಾಹಂದರ ಮತ್ತು ನಿರೂಪಣೆಯಿಂದಲೇ ಆಯ್ಕೆ ಯಾಗಿದೆ ಎಂದು ಎಫ್ ಎಫ್ ಐನ ಕಾರ್ಯದರ್ಶಿ ಸುಪ್ರಾನ್ ಸೇನ್ ತಿಳಿಸಿದ್ದಾರೆ.

ಈಗಾಗಲೇ ಈ ಚಿತ್ರ 17 ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿರುವುದಲ್ಲದೆ ವೆನಿಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪ್ರೀಮಿಯರ್ ಪ್ರದರ್ಶನ ಕಂಡಿದೆ.

Write A Comment