ಮನೋರಂಜನೆ

ದೇಶದಲ್ಲಿ ರೇಪ್ ಹೆಚ್ಚಾಗಲು ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಕಾರಣವಂತೆ ! ರಾಖಿ ಸಾವಂತ್ ಕಿಡಿ

Pinterest LinkedIn Tumblr

rakhisunny

ದೆಹಲಿ: 2011ರಲ್ಲಿ ಬಿಗ್ ಬಾಸ್ ಪ್ರವೇಶಕ್ಕಾಗಿ ಭಾರತಕ್ಕೆ ಬಂದ ಇಂಡೋ-ಕೆನಡಿಯನ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಒಂದಲ್ಲಾ ಒಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದಾಳೆ. ಡಜನ್‍ಗೂ ಹೆಚ್ಚು ಚಿತ್ರಗಳನ್ನು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿರುವ ಸನ್ನಿಯ ಮೇಲೆ ಇದೀಗ ಮತ್ತೆ ರಾಖಿ ಸಾವಂತ್ ಕಣ್ಣು ಬಿದ್ದಿದೆ.

ಇತ್ತೀಚೆಗೆ ಮುಂಬೈನ ಕಾರ್ಯಕ್ರಮವೊಂದರಲ್ಲಿ ಪ್ರತ್ಯಕ್ಷಳಾದ ನಟಿ ರಾಖಿ ಸಾವಂತ್, ಸನ್ನಿ ಕಾಂಡೋಮ್ ಜಾಹಿರಾತಿನಿಂದ ಮತ್ತು ಚಿತ್ರಗಳಲ್ಲಿ ಸೆಕ್ಸಿ ಹಾಡುಗಳಲ್ಲಿ ಕಾಣಿಸಿಕೊಂಡು ಪುರುಷರ ಉದ್ರೇಕವನ್ನು ಹೆಚ್ಚು ಮಾಡುತ್ತಿದ್ದಾಳೆ. ಹೀಗಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕೂಡಲೇ ಸನ್ನಿಯನ್ನು ದೇಶದಿಂದ ಬ್ಯಾನ್ ಮಾಡಬೇಕು ಎಂದು ಗುಡುಗಿದ್ದಾಳೆ.

ಸನ್ನಿ ತನ್ನ ಮೈಯನ್ನು ಪೂರ್ತಿ ಮುಚ್ಚಿಕೊಂಡರೆ ಮಾತ್ರ ಚಿತ್ರಗಳಲ್ಲಿ ಅಭಿನಯಿಸಬೇಕು ಇಲ್ಲವಾದಲ್ಲಿ ಬ್ಯಾನ್ ಆಗಬೇಕು ಎಂದು ಆಗ್ರಹಿಸಿದ್ದಾಳೆ.

Write A Comment