ಮನೋರಂಜನೆ

ಕತ್ರಿನಾ ಜೊತೆ ರೋಮ್ಯಾನ್ಸ್ ಮಾಡಲು ಸಲ್ಮಾನ್ ಖಾನ್ ರೆಡಿ !

Pinterest LinkedIn Tumblr

sal

ಮುಂಬೈ: ಬಾಲಿವುಡ್ ನ ಮಾಜಿ ಪ್ರೇಮಿಗಳಾದ ಕತ್ರಿನಾ ಕೈಫ್, ಸಲ್ಮಾನ್ ಖಾನ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಸುದ್ದಿಗಳು ಬಾಲಿವುಡ್ ನಲ್ಲಿ ಹರದಾಡುತ್ತಿದ್ದು, ಇದು ಬಹುತೇಕ ಖಚಿತವೂ ಆಗಿದೆ.

ಏಕ್ತಾ ಟೈಗರ್ ಚಿತ್ರದ ಮೂಲಕ ಮೋಡಿ ಮಾಡಿದ್ದ ಕ್ಯಾಟ್- ಸಲ್ಲು ಜೋಡಿ ಸಲ್ಮಾನ್ ಭಾವ ಅತುಲ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರದಲ್ಲಿ ತೆರೆ ಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ನಾನು ಅತುಲ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ, ಎಂದಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾಗೆ ಸಹ ಮುಖ್ಯ ಪಾತ್ರವಿದೆಯಾ ಎಂದು ಕೇಳಲಾಗಿ, ‘ಅವರು ಈ ಚಿತ್ರದಲ್ಲಿ ನಟಿಸಬೇಕೆಂಬುದು ನನ್ನ ಬಯಕೆ. ಆದರೆ ಅದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ”, ಎಂದು ಸಲ್ಲು ತಮ್ಮ ಮನದಿಂಗಿತವನ್ನು ಹೇಳಿಕೊಂಡಿದ್ದಾರೆ.

ಈ ಹಿಂದೆ ಏಕ್ತಾ ಟೈಗರ್ ಚಿತ್ರವನ್ನು ನಿರ್ದೇಶಿಸಿದ್ದ ಕಬೀರ್ ಖಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಸಲ್ಲು ಮತ್ತು ಕ್ಯಾಟ್ ಜೋಡಿ ಅಭಿಮಾನಿಗಳ ಬಹುದಿನಗಳ ನಿರೀಕ್ಷೆ ಈಡೇರಲಿದೆ.

Write A Comment