ಕನ್ನಡ ವಾರ್ತೆಗಳು

ಎಂಆರ್‌ಪಿಎಲ್‌ನ ಕೋಕ್ – ಸಲ್ಫರ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು : ಸ್ಥಳೀಯರಲ್ಲಿ ಆತಂಕ

Pinterest LinkedIn Tumblr

MRPL_Big_Sound_1

ಮಂಗಳೂರು, ಸೆ.9: ಮಂಗಳೂರಿನ ಸುರತ್ಕಲ್ – ಕಾಟಿಪಳ್ಳ ಸಮೀಪದ ಜೋಕಟ್ಟೆಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ಎಂಆರ್‌ಪಿಎಲ್‌ನ ಕೋಕ್ – ಸಲ್ಫರ್ ಘಟಕದಲ್ಲಿ ಮಂಳವಾರ ರಾತ್ರಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲಿನ ನಿವಾಸಿಗಳು ಕೆಲವು ಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

ಮಂಗಳವಾರ ರಾತ್ರಿ 9ರ ಸುಮಾರಿಗೆ ಕೋಕ್-ಸಲ್ಫರ್ ಘಟಕದೊಳಗಿನಿಂದ ಭಾರೀ ಶಬ್ದ ಕೇಳಿ ಬಂದಿದ್ದು, ಇದು ಸ್ಥಳೀಯರನ್ನು ಭೀತಿಗೊಳಪಡಿಸಿತ್ತು. ಪ್ರಾರಂಭದಲ್ಲಿ ಘಟಕದಲ್ಲಿ ಸ್ಫೋಟ ನಡೆದಿದೆ ಎಂಬ ಸುದ್ದಿ ಹರಡಿತ್ತು. ಇದು ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿತ್ತು.

ಎಂಆರ್‌ಪಿಎಲ್‌ನಿಂದ ಹೊರಡುವ ಹೊಗೆಯ ಕೊಳವೆಯಲ್ಲಿ ಎಂದಿಗಿಂತ ಹೆಚ್ಚು ಬೆಂಕಿ ಕಾಣಿಸಿಕೊಂಡಿದ್ದರಿಂದ ಹಾಗೂ ಇದೇ ಸಂದರ್ಭದಲ್ಲಿ ಹಠಾತ್ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸ್ಥಳೀಯರು ಮತ್ತಷ್ಟು ಭೀತಿಗೊಗಾದರು.

ಇಂಥಹ ಶಬ್ದ ಸಾಮಾನ್ಯ ಆತಂಕ ಪಡಬೇಡಿ : ಎಂಆರ್‌ಪಿಎಲ್ ಮುಖ್ಯಸ್ಥೆ ಲಕ್ಷ್ಮೀ ಕುಮಾರನ್

‘‘ಪೆಟ್ರೋಲಿಯಂ ಉತ್ಪನ್ನ ತಯಾರಿಕೆಯ ಸಂದರ್ಭದಲ್ಲಿ ಇಂಥಹ ಶಬ್ದ ಆಗುವುದು ಸಾಮಾನ್ಯ. ಹಾಗೂ ಎಂಆರ್‌ಪಿಎಲ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದುದರಿಂದ ಕತ್ತಲು ಆವರಿಸಿ ಕೊಂಡಿದ್ದು, ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ’’ ಎಂದು ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿ ಲಕ್ಷ್ಮೀ ಕುಮಾರನ್ ಪತ್ರಿಕೆಗೆ ತಿಳಿಸಿದ್ದಾರೆ.

(No explosion …Phase 3 has a black out because..

Please rest assured there has been no explosion in MRPL.

There has been a break down in power supply because of which there is a black out and the trapped gases are being pushed out and hence the flare is larger than usual)

Lakshmi M Kumaran
GenMgr,  Corp Comm & Skill Dev. Centre
MRPL

Write A Comment