ಮನೋರಂಜನೆ

ಟ್ವಿಟರ್‌ನಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕೊಹ್ಲಿ

Pinterest LinkedIn Tumblr

Virat-Kohlirat

ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಟ್ವಿಟರ್‌ನಲ್ಲಿ 8 ದಶಲಕ್ಷ (ಮಿಲಿಯನ್) ಅನುಯಾಯಿಗಳನ್ನು ಹೊಂದುವ ಮೂಲಕ ಅತಿಹೆಚ್ಚು ಅನುಯಾಯಿ ಹೊಂದಿರುವ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 7.73 ದಶಲಕ್ಷ ಅನುಯಾಯಿಗಳನ್ನು ಹೊಂದಿದ್ದರೆ, ಟೀಂ ಇಂಡಿಯಾದ ನಾಯಕ ಎಂ.ಎಸ್. ಧೋನಿ 4.52 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

8 ಮಿಲಿಯನ್ ಅಭಿಮಾನಿಗಳ ಅಭಿಮಾನಕ್ಕೆ ಸಂತಸಗೊಂಡಿರುವ ವಿರಾಟ್ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದ ಎಂದು ಟ್ವಿಟ್ ಮಾಡಿ ವಾವ್ ಗ್ರೇಟ್ ಫುಲ್ ಎಂದು ಹೇಳಿದ್ದಾರೆ.

Write A Comment