ಮಂಗಳೂರು : ದ.ಕ.ಜಿಲ್ಲಾ ಮದ್ಯ ಮಾರಾಟಗಾರರ ಸಂಘ (ರಿ) ಮಂಗಳೂರು, ಇವರ ವತಿಯಿಂದ ಮಂಗಳೂರು ವಿಭಾಗದ ಆಬ್ಕಾರಿ ಉಪ ಅಯುಕ್ತ ಹಾಗೂ ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜಾರ್ಜ್ ಪಿಂಟೋ ಅವರ ಅಭಿನಂದನಾ
ಕಾರ್ಯಕ್ರಮ ಮಂಗಳವಾರ ನಗರದ ಕುಡ್ಲ ಹೋಟೆಲ್‌ನ ಸಭಾಂಗಣದಲ್ಲಿ ಜರಗಿತು. ಸಂಘದ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿಯವರ ನೇತ್ರತ್ವದಲ್ಲಿ ಶ್ರೀ ಜಾರ್ಜ್ ಪಿಂಟೋ ಅವರನ್ನು ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ – ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಎ.ಸದಾನಂದ ಶೆಟ್ಟಿಯವರು, ಶ್ರೀ ಜಾರ್ಜ್ ಪಿಂಟೋ ಅವರು ಓರ್ವ ಉತ್ತಮ ಅಧಿಕಾರಿಯಾಗಿದ್ದು, ಸನ್ನದುದಾರರ ಸಮಸೈಗಳನ್ನು ಅರಿತುಕೊಂಡು ಸರಕಾರದ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಸಮಸೈ ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು. ಮಾತ್ರವಲ್ಲದೇ ಸನ್ನದುದಾರರ ಸಂಕಷ್ಟಗಳಿಗೆ ಅವರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿತ್ತು. ತಮ್ಮ ಸೇವಾ ಅವಧಿಯಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಯಾವೂದೇ ಕಪ್ಪು ಚುಕ್ಕೆ ಬರದಂತೆ ಅತ್ಯೂತ್ತಮವಾಗಿ ಕರ್ತವ್ಯ ನಿರ್ವಾಹಿಸುತ್ತಾ ಬಂದಿರುವ ನಮ್ಮ ಉರಿನವರೇ ಆದ (ಮಣ್ಣಿನ ಮಗ ) ಜಾರ್ಜ್ ಪಿಂಟೋ ಅವರನ್ನು ಗೌರವಿಸಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾರ್ಜ್ ಪಿಂಟೋ ಅವರು, ಯಾವೂದೇ ಸಂಘಟನೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಾಹಿಸಿದಾಗ ಯಶಸ್ಸು ಸಾಧ್ಯ. ಆದರೆ ಅದಕ್ಕೂ ಮೊದಲು ಸಂಘಟನೆಯನ್ನು ಬಲಪಡಿಸುವ ಕೆಲಸವಾಗಬೇಕು ಎಂದು ಹೇಳಿದ ಅವರು, ಹಬ್ಬಹರಿದಿನಗಳ ಮತ್ತು ಇನ್ನಿತರ ಕಾರ್ಯಕ್ರಮಗಳ ಸಂದರ್ಭದಲ್ಲಿ ಕಾನೂನು ಸುವವ್ಯಸ್ಥೆಯ ಹೆಸರಿನಲ್ಲಿ ಅಗಾಗ ಮದ್ಯ ಮಾರಾಟವನ್ನು ನಿಷೇಧಿಸುವ ಸರಕಾರದ ಕ್ರಮ ಅಸಾಂವಿಧಾನಿಕ ಮತ್ತು ಅವೈಜ್ಞಾನಿಕವಾಗಿದ್ದು, ಈ ಬಗ್ಗೆ ಸನ್ನದುದಾರರು ಒಗ್ಗಟಾಗಿ ನ್ಯಾಯಲಯದ ಮೊರೆ ಹೋಗ ಬೇಕು ಎಂದು ಸಲಹೆ ನೀಡಿದರು.
ಇಲಾಖೆ ಮತ್ತು ಮದ್ಯ ಮಾರಾಟಗಾರ ನಡುವೆ ಸಂವಹನ ಕೊರತೆಯಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಬ್ಕಾರಿ ಇಲಾಖೆ, ಪೊಲೀಸ್ ಇಲಾಖೆ ಕಂದಾಯ ಇಲಾಖೆ ಮತ್ತು ಸನ್ನದುದಾರರ ಸಭೆ ನಡೆಸುವ ಮೂಲಕ ಸಮಸೈಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸ ಬೇಕು. ಮಧ್ಯ ಮಾರಾಟದ ಗುರಿ ಸಾಧನೆಗೆ ಸರಕಾರ ಒತ್ತಾಯ ತರುವುದು ಸರಿಯಲ್ಲ. ಇದು ಕೂಡ ಅವೈಜ್ಞಾನಿಕ ಕ್ರಮವಾಗಿದ್ದು, ವ್ಯವಸ್ಥೆಯ ಲಾಭ ಪಡೆದು ಹೆಚ್ಚಿನ ದರಕ್ಕೆ ಮಧ್ಯ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಜೊತೆಗೆ ಸರಕಾರವೇ ಸಾರ್ವಜನಿಕರನ್ನು ಕುಡಿಯಲು ಪ್ರೇರಪಣೆ ಮಾಡಿದಂತೆ ಆಗುತ್ತದೆ ಎಂದರು.
ಈಗಾಗಲೇ ಅಕ್ರಮ ಮದ್ಯ ಮಾರಾಟ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಅಕ್ರಮ ಮದ್ಯ ಮಾರಟ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಇಲಾಖೆಗೆ ಇನ್ನು ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆ ಇದೆ. ಸರಕಾರ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದು ಪಿಂಟೋ ಹೇಳಿದರು.
ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ (ಫುಡ್‌ಲ್ಯಾಂಡ್ ಫ್ಯಾಮಿಲ್ ರೆಸ್ಟೋರೆಂಟ್ ಮಾಲಕ) ಗಣೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರುಗಳಾದ ಜೆ.ಎಲ್.ಪಿಂಟೋ, ಪಿ.ಎಮ್.ನಾರಾಯಣ್, ವಿನೋದ್ ಪುತೂರು, ಪ್ರಧಾನ ಕಾರ್ಯದರ್ಶಿ ಸಂಕಪ್ಪ ಶೆಟ್ಟಿ, ಕಾರ್ಯದರ್ಶಿ ಅಪ್ಪಚ್ಚು ಬಂಟ್ವಾಳ್, ಕೋಶಾಧಿಕಾರಿ ಚಂದ್ರನಾಥ್ ಅತ್ತಾವರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಸಂಚಾಲಕ ರಾಜ್‌ಗೋಪಾಲ್ ರೈ ಕಾರ್ಯಕ್ರಮ ನಿರೂಪಿಸಿದರು.















