ಮನೋರಂಜನೆ

ಡ್ರೇಕ್ – ಸೆರೆನಾ ವಿಲಿಯಮ್ಸ್ ಕಿಸ್ ಮೊಬೈಲಿನಲ್ಲಿ ಸೆರೆ

Pinterest LinkedIn Tumblr

serenaಸೆರೆನಾ ವಿಲಿಯಮ್ಸ್ ಕದ್ದು ಕಿಸ್ ಹೊಡೆದಳಾ? ಹೌದು. ಲಾಸ್ ಏಂಜಲೀಸ್‌ನ ರೆಸ್ಟೋರೆಂಟ್‌ನಲ್ಲಿ ಪಾಪ್ ಸಂಗೀತಗಾರ ಡ್ರೇಕ್ ಜೊತೆ ಲಿಪ್‌ಲಾಕ್ ಮಾಡ್ಕೊಂಡಿದ್ದಾಳೆ. ಇಬ್ಬರೂ ರಾತ್ರಿ ಇಟಾಲಿಯನ್ ಊಟ ಮುಗಿಸಿದ್ದಾರೆ. ವೇಟರ್ ಎದುರೇ ಮುತ್ತು ಕೊಟ್ಟುಕೊಂಡು, ಅಪ್ಪಿಕೊಂಡಿದ್ದಾರೆ. ಇವರ ಈ ಖಾಸಗಿ ಮುದ್ದಾಟದ ಫೋಟೋಗಳು ಈಗ ಲೀಕಾಗಿವೆ. ಇಷ್ಟೆ ಅಲ್ಲ, ಈ ರೆಸ್ಟೋರೆಂಟಿನ್ ಹಿಂಭಾಗದಲ್ಲೇ ಇವರಿಬ್ಬರೂ ಪ್ರೈವೇಟ್ ರೂಮನ್ನೂ ಬಾಡಿಗೆ ತೆಗೆದುಕೊಂಡಿದ್ದರು. ಊಟ ಮುಗಿಸಿ ರೂಮ್ ಸೇರಿದ ಪ್ರೇಮಪಕ್ಷಿಗಳು ಮೈಮರೆತು ಬಿಟ್ಟವು.

ರೆಸ್ಟೋರೆಂಟ್‌ನ ಕೆಲ ಕುತೂಹಲಿಗಳು, ಗ್ರಾಹಕರು ಇವರ ಮುದ್ದಾಟವನ್ನು ಇಣುಕಿ ನೋಡಿದ್ದಾರೆ. ಆ ರೂಮಿನ ಕರ್ಟೈನನ್ನೂ ಸರಿಸುವಷ್ಟು ಇಬ್ಬರಿಗೂ ಪುರುಸೊತ್ತಿರಲಿಲ್ಲ. ಸೋಫಾದ ಮೇಲೆ ಸೆರೆನಾಳನ್ನು ಕೂರಿಸಿ ಡ್ರೇಕ್ ಮುದ್ದಿಸುತ್ತಿರುವ ದೃಶ್ಯವನ್ನು ಅನೇಕರು ಮೊಬೈಲ್‌ನಲ್ಲಿ ಸೆರೆಹಿಡಿದು ಅಮೆರಿಕ ತುಂಬಾ ಹರಡಿದ್ದಾರೆ.

ಸೆರೆನಾ ಈ ಡ್ರೇಕ್ ಜೊತೆ ಓಪನ್ನಾಗಿ ಸೆರೆಸಿಕ್ಕಿ ಬಿದ್ದಿದ್ದು ಇದೇ ಮೊದಲು. ಇವರಿಬ್ಬರ ಪ್ರೇಮ ಜುಲೈನಲ್ಲಿ ಚಿಗುರೊಡೆದಿದೆ. ಡಬ್ಯ್ಲುಟಿಎ ಟೂರ್ನಿಮೆಂಟ್‌ನಲ್ಲಿ ಸೆರೆನಾ ವಿಜಯೋತ್ಸವ ಆಚರಿಸಿಕೊಳ್ಳುವಾಗಲೂ ಡ್ರೇಕ್ ಅಪ್ಪಿಕೊಂಡು ಶುಭ ಹಾರೈಸಿದ್ದ. ಮೊನ್ನೆ ವಿಂಬಲ್ಡನ್‌ನಲ್ಲೇ ಸೆರೆನಾ ಆಡುವಾಗಲೂ ಡ್ರೇಕ್ ವಿಐಪಿ ಸೀಟಿನಲ್ಲಿ ಕುಳಿತು ಚಪ್ಪಾಳೆ ಹೊಡೆಯುತ್ತಿದ್ದ. ಆದರೆ, ಅಲ್ಲೆಲ್ಲೂ ಇಂಥ ಹಸಿಬಿಸಿ ಅವಕಾಶ ಸಿಕ್ಕಿರಲಿಲ್ಲ!

ಅಂದಹಾಗೆ, ಪಾಪ್ ಸಂಗೀತಗಾರ ಹಾಗೂ ನಟ ಡ್ರೇಕ್‌ಗೆ ಇನ್ನೂ 28 ವರುಷ, ಸೆಪ್ಟೆಂಬರ್ ಬಂದರೆ ಸೆರೆನಾ 33 ಮೀರುತ್ತಾಳೆ!

Write A Comment