ಅಗ್ರಾ: ಐದು ಮಕ್ಕಳನ್ನು ಹೊಂದಿರುವ ಪ್ರತಿ ಹಿಂದೂ ಕುಟುಂಬಕ್ಕೆ ತಲಾ 2 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಶಿವಸೇನಾ ಆಗ್ರಾ ಘಟಕ ಘೋಷಿಸಿದೆ.
ಇತ್ತೀಚಿನ ಸಮೀಕ್ಷೆಗಳಲ್ಲಿ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಶಿವಸೇನಾ ಜಿಲ್ಲಾ ಮುಖ್ಯಸ್ಥ ವೀನು ಲವಾನಿಯಾ ಅವರು, ಸೇನಾ ಘಟಕ ಐದು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಬಹುಮಾನ ನೀಡಲಿದೆ ಎಂದಿದ್ದಾರೆ.
2010ರಿಂದ 2015ರ ನಡುವೆ ಐದು ಮಕ್ಕಳನ್ನು ಹೊಂದಿದ ಪ್ರತಿ ಹಿಂದೂ ಕುಟುಂಬ ಎರಡು ಲಕ್ಷ ರುಪಾಯಿ ಬಹುಮಾನ ಪಡೆಯಲಿದೆ. ಪೋಷಕರು ಪಾಲಿಕೆಯಿಂದ ಜನ್ಮದಿನದ ಪ್ರಮಾಣ ಪತ್ರ ನೀಡಿದರೆ ಬಹುಮಾನ ನೀಡಲಾಗುವುದು ಎಂದು ವೀನು ತಿಳಿಸಿದ್ದಾರೆ.
ಇದೇ ವೇಳೆ ಸಾಮಾನ್ಯ ನೀತಿ ಸಂಹಿತೆ ಜಾರಿಗೆ ಆಗ್ರಹಿಸಿರುವ ಶಿವಸೇನೆ, ಒಬ್ಬ ವ್ಯಕ್ತಿ ಹಲವು ಪತ್ನಿಯರನ್ನು ಹೊಂದುವ ಪದ್ದತಿ ಅಂತ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದೆ.