ಮನೋರಂಜನೆ

ಉಗ್ರ ಸಯೀದ್‌ ಮನವಿಗೆ ಮಣಿದು ಫ್ಯಾಂಟಮ್‌ ಚಿತ್ರ ನಿಷೇಧಿಸಿದ ಪಾಕ್‌

Pinterest LinkedIn Tumblr

saifಹೊಸದಿಲ್ಲಿ: ಭಾರತ-ಪಾಕಿಸ್ತಾನಕ್ಕೆ ಸಂಬಂಧಿಸಿದ ಕತೆ ಇರುವ ಬಾಲಿವುಡ್‌ನ ನಿರ್ದೇಶಕ ಕಬೀರ್‌ ಖಾನ್‌ ನಿರ್ದೇಶನದ ಫ್ಯಾಂಟಮ್‌ ಚಿತ್ರಕ್ಕೆ ನಿರೀಕ್ಷೆಯಂತೆ ಪಾಕಿಸ್ತಾನ ಕೋರ್ಟ್‌ ನಿಷೇಧ ಹೇರಿದೆ.

ಆದರೆ ಈ ನಿಷೇಧ ಹೇರುವಿಕೆ ಹಿಂದೆ ಪಾಕಿಸ್ತಾನದಲ್ಲಿದ್ದುಕೊಂಡು ಭಾರತದಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿರುವ, 26/11ರ ದಾಳಿಯ ರೂವಾರಿಯಾಗಿರುವ ಉಗ್ರ ಹಫೀಜ್‌ ಸಯೀದ್‌ ಕೈವಾಡ ಈಗ ಬಹಿರಂಗವಾಗಿದೆ. ಸಯೀದ್‌ ಮನವಿಗೆ ಮಣಿದು ಫ್ಯಾಂಟಮ್‌ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲು ಅಲ್ಲಿನ ಕೋರ್ಟ್‌ ತೀರ್ಮಾನಿಸಿದೆ.

26/11ರ ದಾಳಿಯ ಕಥಾವಸ್ತು ಇರುವ ಸಿನಿಮಾದಲ್ಲಿ ತಮ್ಮ ಹಾಗೂ ತಮ್ಮ ಸಂಘಟನೆ ವಿರುದ್ಧ ಹೊಲಸು ಪ್ರಚಾರ ನಡೆಸಲಾಗಿದೆ. ಅಲ್ಲದೆ ಸಿನಿಮಾದಲ್ಲಿ ತನ್ನ ಸಂಘಟನೆಯಾದ ಜೆಯುಡಿ ಹಾಗೂ ಪಾಕಿಸ್ತಾನದ ವಿರುದ್ಧ ವಿಷ ಕಾರಲಾಗಿದೆ ಎಂದು ಆತ ದೂರಿದ್ದಾನೆ. 2012ರಲ್ಲಿ ಕಬೀರ್‌ ಖಾನ್‌ ಏಕ್‌ ಥಾ ಟೈಗರ್‌ ಸಿನಿಮಾ ನಿರ್ದೇಶಿಸಿದ್ದರು. ಆ ಸೂಪರ್‌ ಹಿಟ್‌ ಚಿತ್ರವನ್ನೂ ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು.

ಇದೀಗ ಫ್ಯಾಂಟಮ್‌ ಸಿನಿಮಾ ಸಿದ್ಧವಾಗಿದ್ದು, ಅದನ್ನು ಕ್ರೈಂ ಲೇಖಕ ಹುಸೇನ್ ಝೈದಿ ಬರೆದಿರುವ ‘ಮುಂಬೈ ಅವೆಂಜರ್ಸ್’ ಎಂಬ ಕಾದಂಬರಿ ಆಧರಿಸಿ ತಯಾರಿಸಲಾಗಿದೆ. ಈ ಸಿನಿಮಾವನ್ನು ಇದೇ ಆಗಸ್ಟ್ 28ರಂದು ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸಿದ್ಧಾರೆ.

Write A Comment