ನಿಖಿಲ್ ಅಡ್ವಾಣಿ ನಿರ್ದೇಶನದ ಕಟ್ಟಿ ಬಟ್ಟಿ ಸಿನಿಮಾದಲ್ಲಿ ಕಂಗನಾ ಅಭಿನಯಿಸುತ್ತಿರೋದು ಹಳೆ ಸುದ್ದಿ. ರಂಗನಾ ಸಿನಿಮಾದಲ್ಲಿ ನಟಿಸಲು ನಾನೇ ಅವರ ಮನವೊಲಿಸಿದ್ದೆ ಅಂತಾ ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಹೇಳಿದ್ದರು. ಆದ್ರೀಗ ಸಲ್ಲು ಮಾತನ್ನು ಕಂಗನಾ ಅಲ್ಲಗಳೆದಿದ್ದಾರೆ.
ಕಟ್ಟಿಬಟ್ಟಿ ಸಿನಿಮಾದ ಪ್ರಚಾರ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಕಂಗನಾ ಸಲ್ಮಾನ್ ಸಿನಿಮಾದಲ್ಲಿ ನಟಿಸಲು ನನ್ನ ಮನವೊಲಿಸಿಲ್ಲ. ಆದ್ರೆ ಸಿನಿಮಾದ ಸ್ಕ್ರಿಫ್ಟ್ ಹೀಗಿದೆ ಅಂತಾ ಹೇಳಿದ್ರು. ನಾನು ಸ್ಕ್ರಿಫ್ಟ್ ತಿಳಿದುಕೊಂಡ ಬಳಿಕ ನನಗೆ ಇಷ್ಟಾವಾಯ್ತು. ಅದಕ್ಕಾಗಿ ಒಪ್ಪಿಕೊಂಡೆ ಅಷ್ಟೇ ಎಂದಿದ್ದಾರೆ. ಅಲ್ಲದೇ ನನಗೆ ಈಗಾಗಲೇ ಹತ್ತಾರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಿಸಲು ಆಫರ್ ಬರುತ್ತಿದೆ ಅಂತಾ ಕಂಗನಾ ತಿಳಿಸಿದ್ದಾರೆ.
ಇನ್ನು ಸಿನಿಮಾದಲ್ಲಿ ಕಂಗನಾಗೆ ಜೋಡಿಯಾಗಿ ಇಮ್ರಾಮ್ ಖಾನ್ ಕಾಣಿಸಿಕೊಂಡಿದ್ದು. ಈ ಸಿನಿಮಾ ಈಗಾಗಲೇ ಬಾಲಿವುಡ್ ಅಂಗಳದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮುಂದಿನ ತಿಂಗಳು 18 ರಂದು ಈ ಸಿನಿಮಾ ಪ್ರೇಕ್ಷಕರ ಎದುರಿಗೆ ಬರಲಿದೆ.