ಮನೋರಂಜನೆ

‘ಫ್ಯಾನ್‌’ ಹಿಂದಿ ಸಿನಿಮಾ ಚಿತ್ರೀಕರಣ ಮುಗಿಸಿ ಭಾವುಕರಾಗಿ ಪ್ರತಿಕ್ರಿಯೆ ನೀಡಿದ ಶಾರುಖ್‌ ಖಾನ್‌

Pinterest LinkedIn Tumblr

sharukh‘ಫ್ಯಾನ್‌’ ಹಿಂದಿ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಶಾರುಖ್‌ ಖಾನ್‌ ಅತಿ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಗೌರವ್‌ ಎಂಬ ಹೆಸರಿನ ಅಭಿಮಾನಿಯ ಪಾತ್ರದಲ್ಲಿ ಶಾರುಖ್‌ ನಟಿಸಿದ್ದು, ಈ ಸಿನಿಮಾ ಅವರ ಹೃದಯಕ್ಕೆ ಹತ್ತಿರವೆನಿಸಿದೆ.

‘ಮುಗಿದೇ ಹೋಯಿತಲ್ಲ, ಫ್ಯಾನ್‌ ಚಿತ್ರೀಕರಣ. ಸಾಮಾನ್ಯ ಪಾತ್ರವನ್ನು ತೋರಿಸುವ ಅಸಾಮಾನ್ಯ ಯತ್ನವನ್ನು ಚಿತ್ರತಂಡ ಮಾಡಿದೆ. ಒಳ್ಳೆಯದೆಲ್ಲವೂ ಬೇಗ ಮುಗಿದುಹೋಗುತ್ತವೆ, ಅಲ್ಲವೇ?’ ಎಂಬ ಧಾಟಿಯ ಪೋಸ್ಟ್‌ ಅನ್ನು ಶಾರುಖ್‌ ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ಮನೀಶ್‌ ಶರ್ಮ ನಿರ್ದೇಶನದ ‘ಫ್ಯಾನ್‌’ ಸಿನಿಮಾ ಮುಂದಿನ ವರ್ಷ ಏಪ್ರಿಲ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಯಶ್‌ ರಾಜ್‌ ನಿರ್ಮಾಣ ಸಂಸ್ಥೆ ತಯಾರಿಸಿರುವ ಈ ಸಿನಿಮಾ ಬಗ್ಗೆ ಶಾರುಖ್‌ಗೆ ಹೆಚ್ಚು ನಿರೀಕ್ಷೆಗಳಿವೆ.

ರೋಹಿತ್‌ ಶೆಟ್ಟಿ ನಿರ್ದೇಶನದ ‘ದಿಲ್‌ವಾಲೆ’ ಸಿನಿಮಾದಲ್ಲೂ 49 ವರ್ಷ ವಯಸ್ಸಿನ ಶಾರುಖ್‌ ಅಭಿನಯಿಸಿದ್ದು, ಇದು ‘ಫ್ಯಾನ್‌’ಗಿಂತ ಮೊದಲೇ ತೆರೆಕಾಣುವ ಸಾಧ್ಯತೆ ಇದೆ. ಕಾಜೋಲ್‌, ವರುಣ್‌ ಧವನ್‌, ಕೃತಿ ಸನನ್‌, ಬೊಮನ್‌ ಇರಾನಿ ಮೊದಲಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ವಲುಶಾ ಡಿಸೋಜಾ, ಇಲಿಯಾನಾ ಡಿ ಕ್ರೂಸ್‌, ಪ್ರಿಯಾ ಪಿಗಾಲ್ಕರ್‌, ಅಲಿ ಫೈಸಲ್‌ ಮೊದಲಾದವರು ಅಭಿನಯಿಸಿರುವ ‘ಫ್ಯಾನ್‌’ ಸಿನಿಮಾದಲ್ಲಿ ಶಾರುಖ್‌ ಅವರ ಆಯ್ದ ಅಭಿಮಾನಿಗೂ ನಟಿಸುವ ಅವಕಾಶ ದೊರೆಯಲಿದೆ. ಕಥೆಯ ಎಳೆಯನ್ನು ಬಿಟ್ಟುಕೊಡದ ಚಿತ್ರತಂಡ, ಚಿತ್ರೀಕರಣ ಪ್ರಾರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರ ಗಿಟ್ಟಿಸುತ್ತಾ ಬಂದಿದೆ. ‘ಹ್ಯಾಪಿ ನ್ಯೂ ಇಯರ್‌’ ಸಿನಿಮಾ ನಂತರ ಶಾರುಖ್‌ ಎಚ್ಚರಿಕೆಯ ಹೆಜ್ಜೆಗಳನ್ನು ಇಡತೊಡಗಿದ್ದಾರಂತೆ.

Write A Comment