ಸಿನಿಮಾ ತಾರೆಯರು ತಮ್ಮ ಸಿನಿಮಾ ರಿಲೀಸ್ ಗೆ ಹತ್ತಿರವಾಗುತ್ತಿದ್ದಂತೆ ತಮ್ಮ ನೆಚ್ಚಿನ ದೇವಾಲಯಕ್ಕೋ ಇಲ್ಲಾ ದರ್ಗಾಕ್ಕೊ, ಚರ್ಚ್ ಗೋ ಹೋಗೋದು ಸಾಮಾನ್ಯ. ಕಳೆದ ಶನಿವಾರವಷ್ಟೇ ನಟಿ ಕತ್ರೀನಾ ಕೈಫ್ ಕೂಡ ಅಜ್ಮೀರ್ ದರ್ಗಾಗೆ ಭೇಟಿ ನೀಡಿದ್ದಾರೆ.
ಕಬೀರ್ ಖಾನ್ ನಿರ್ದೇಶನದ ಫ್ಯಾಂಟಮ್ ಸಿನಿಮಾದಲ್ಲಿ ಕತ್ರೀನಾ ಕೈಫ್ ಹಾಗೂ ಸೈಫ್ ಆಲಿಖಆನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಆಗಸ್ಟ್ 28ಕ್ಕೆ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪಾರ್ಥನೆ ಸಲ್ಲಿಸುವುದಕ್ಕಾಗಿ ಕತ್ರೀನಾ ಅಜ್ಮೀರ್ ದರ್ಗಾಕ್ಕೆ ತೆರಲಿದ್ದರು. ಇನ್ನು ಕತ್ರೀನಾ ಅಜ್ಮೀರ್ ಗೆ ಭೇಟಿ ನೀಡುತ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಯೆಕ್ತಾ ಟೈಗರ್, ಧೂಮ್ 3, ನಮಸ್ತೆ ಲಂಡನ್ ಸಿನಿಮಾದ ರಿಲೀಸ್ ಗೂ ಮುನ್ನವೂ ಕ್ಯಾಟ್ ದರ್ಗಾಕ್ಕೆ ಭೇಟಿ ನೀಡಿದ್ದರು.
ಇನ್ನು ದರ್ಗಾಕ್ಕೆ ಭೇಟಿ ನೀಡುವ ವೇಳೆ ಯಾರಿಗೂ ಗೊತ್ತಾಗದಂತೆ ಕ್ಯಾಟ್ ತಮ್ಮ ಮುಖಕ್ಕೆ ದುಪ್ಪಟಾದಿಂದ ಕವರ್ ಮಾಡಿಕೊಂಡಿದ್ದರು. ಆದ್ರೂ ಕೆಲವರು ಮಾತ್ರ ಕ್ಯಾಟ್ ನ್ನು ಗುರುತಿಸಿದ್ದಾರಂತೆ. ಒಟ್ಟಿನಲ್ಲಿ ಚಿತ್ರ ಬಿಡುಗೆಡೆಗೂ ಮುನ್ನವೇ ಚಿತ್ರದ ಸಕ್ಸಸ್ ಗಾಗಿ ಕ್ಯಾಟ್ ನಾನಾ ಕಸರತ್ತು ಮಾಡುತ್ತಿದ್ದು ಸಿನಿಮಾ ಆಕೆ ಯಶಸ್ಸು ತಂದುಕೊಡುತ್ತೋ ಕಾದು ನೋಡ್ಬೇಕು.