ಮನೋರಂಜನೆ

ಉಪ್ಪಿ 2 ಚಿತ್ರ ಹೇಗಿದೆ? ಟ್ವಿಟರ್ ವಿಮರ್ಶೆ

Pinterest LinkedIn Tumblr

uppi2_1ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರ ಉಪ್ಪಿ 2 ಇಂದು ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಉಪ್ಪಿ 2 ಮೇನಿಯಾ ಆವರಿಸಿದ್ದು, ಸಾಮಾಜಿಕ ತಾಣಗಳಲ್ಲಿಯೂ ಉಪ್ಪಿ2 ಚಿತ್ರ ಕ್ರೇಜ್ ಭಾರೀ ಜೋರಾಗಿಯೇ ಇದೆ. ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ನಂಥಾ ಸಾಮಾಜಿಕ ತಾಣಗಳಲ್ಲಿಂದು ಉಪ್ಪಿ 2 ಚಿತ್ರದ್ದೇ ಮಾತು.

ಉಪ್ಪಿ 2 ಚಿತ್ರ ಹೇಗಿದೆ? ಎಂಬುದರ ಬಗ್ಗೆ ಎಲ್ಲರಿಗೆ ಕುತೂಹಲವಿದೆ. ಫಸ್ಟ್ ಶೋ ನೋಡಿದ ಹಲವಾರು ಪ್ರೇಕ್ಷಕರು ಟ್ವಿಟರ್ ನಲ್ಲಿ ತಮ್ಮ ಒನ್ ಲೈನ್ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.

ಟ್ವಿಟರ್ ನಲ್ಲಿ ಸಿಕ್ಕ ಅಭಿಪ್ರಾಯಗಳು ಹೀಗಿವೆ

ಉಪ್ಪಿ 2 ಡಿಫರೆಂಟ್ ಆಗಿರುವ ಚಿತ್ರ, ಚಿತ್ರ ಕೊನೆಯವರೆಗೂ ಕುತೂಹಲದಿಂದ ಕೂಡಿದೆ

ಸಿಕ್ಕಾಪಟ್ಟೆ ಕನ್ ಫ್ಯೂಷನ್. ಪಕ್ಕಾ ಉಪೇಂದ್ರ ಸ್ಟೈಲ್

ಅತ್ಯುತ್ತಮ ಚಿತ್ರಕಥೆ, ಪಂಚಿಂಗ್ ಡೈಲಾಗ್ಸ್…

ಬೆಂಗಳೂರಿನಲ್ಲಿನ ಟ್ರೆಂಡ್ಸ್ ಮ್ಯಾಪ್ (ಟ್ರೆಂಡಿಂಗ್ ಆಗಿರುವ ಪದ) ನೋಡಿದರೆ ಅದರಲ್ಲೀಗ #UPPI 2 10 ನೇ ಸ್ಥಾನದಲ್ಲಿದೆ. ಅದೇ  ವೇಳೆ ಬುಕ್ ಮೈ ಶೋ ವೆಬ್ ಸೈಟ್ ನಲ್ಲಿ ಉಪ್ಪಿ2 ಚಿತ್ರಕ್ಕೆ ಯೂಸರ್  ರೇಟಿಂಗ್ ಸೂಪರ್ ಹಿಟ್ ಎಂದು ಕೊಡಲಾಗಿದೆ.

Write A Comment