ರಾಂಚಿ: ಭಾರತ ತಂಡದ ನಾಯಕ ಎಂಎಸ್ ಧೋನಿ ಮಗಳು ಹಾಗೂ ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಸದ್ಯ ಪತ್ನಿ ಸಾಕ್ಷಿ ಧೋನಿ ಮಗಳ ಮೊದಲ ವಿಡಿಯೋ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದ್ದಾರೆ.
ಇಷ್ಟು ದಿನ ಕೇವಲ ಮಗಳ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಸಾಕ್ಷಿ ಹಾಗೂ ಧೋನಿ ಮೊದಲ ಬಾರಿಗೆ ಗುರುವಾರ ಟ್ವಿಟ್ಟರ್‍ನ ಮೂಲಕ ಮಗಳ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಝೀವಾ ಲ್ಯಾಪಟಾಪ್ ಮೂಲಕ ಹಾಡನ್ನು ನೋಡುತ್ತಿರುವ ದೃಶ್ಯಗಳು ಇದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ವೈರಲ್ ಆಗಿದೆ.
ಲ್ಯಾಪ್‍ಟಾಪ್ ತಿಳಿಯದ ಝೀವಾ ಅದರ ಮುಂದೆ ತನ್ನ ಪುಟ್ಟ ಕೈಗಳನ್ನು ಇಟ್ಟು ಕುತೂಹಲದಿಂದ ವೀಕ್ಷಿಸಿದ್ದಾಳೆ. ಲ್ಯಾಪ್‍ಟಾಪ್‍ನಲ್ಲಿ ಝೀವಾ ಇಂಗ್ಲಿಷ್‍ನ ಜನಪ್ರಿಯ ಹಾಡು ಹಿಟ್ ದಿ ಕ್ವಾನ್ ನೋಡಿದ್ದಾಳೆ.