ಬೆಂಗಳೂರು: ಟಾಟಾ ಸ್ಕೈ, ಭಾರತದ ಪ್ರಮುಖ ಡೈರೆಕ್ಟ್ ಟು ಹೋಂ (ಡಿಟಿಎಚ್) ಸೇವಾ ಸಂಸ್ಥೆಯಾಗಿದ್ದು, ಈಗ ಕರ್ನಾಟಕದಲ್ಲಿ ತನ್ನ ಯಶಸ್ಸನ್ನು ಸ್ಯಾಂಡಲ್ವುಡ್ ಸೂಪರ್ಸ್ಟಾರ್ ಸುದೀಪ್ ಅವರೊಂದಿಗೆ ಆಚರಿಸುತ್ತಿದೆ.
ಕರ್ನಾಟಕದಲ್ಲಿನ ಗ್ರಾಹಕರು ಎಂದಿಗೂ ಗುಣಮಟ್ಟದ ಬಗೆಗೆ ಜಾಗರೂಕರಾಗಿರುತ್ತಾರೆ. ಕನ್ನಡ ಚಾನೆಲ್ಗಳ ಗುಚ್ಛ, ಉನ್ನತ ಗುಣಮಟ್ಟದ ಪ್ರಸಾರ, , ಸುದೀಪ್ ಅವನ್ನು ಒಳಗೊಂಡ ಪ್ರಚಾರಾಂದೋಲನ (ರಾಜಿ ಮಾಡ್ಕೋಬೇಡಿ, ಆರಿಸ್ಕೋಳಿ ಟಾಟಾ ಸ್ಕೈ)ದಿಂದಾಗಿ ಟಾಟಾ ಸ್ಕೈ ಎರಡು ವರ್ಷದ ಅವಧಿಯಲ್ಲಿಯೇ ಕರ್ನಾಟಕದಲ್ಲಿ ಮೊದಲ ಆಯ್ಕೆಯ ಡಿಟಿಎಚ್ ಬ್ರಾಂಡ್ ಆಗಿದೆ. ಟಾಟಾ ಸ್ಕೈ ಈಚೆಗೆ ಮೈ 99 (ನನ್ನ 99) ಪ್ಯಾಕ್ ಅನ್ನು ಈ ವರ್ಷದ ಏಪ್ರಿಲ್ ತಿಂಗಳು ಆರಂಭಿಸಿದ್ದು, ಇದು, ಗ್ರಾಹಕರಿಗೆ ಪ್ರಾದೇಶಿಕ ಚಾನೆಲ್ಗಳನ್ನು ಕೈಗೆಟುಕುವ ದರದಲ್ಲಿ ಪಡೆಯಲು ಅವಕಾಶ ಕಲ್ಪಿಸಲಿದೆ. ಅಂದಿನಿಂದ ಟಾಟಾ ಸ್ಕೈ ಬ್ರಾಂಡ್ ಗ್ರಾಹಕರ ಸಂಖ್ಯೆಯಲ್ಲಿ ಶೇ 40ರಷ್ಟು ಪ್ರಗತಿ ಸಾಧಿಸಿದೆ.
ಟಾಟಾ ಸ್ಕೈ ಪ್ರಸ್ತುತ 10,000ಕ್ಕೂ ಅದಿಕ ವಿತರಕರನ್ನು ಹೊಂದಿದ್ದು, ಸ್ಥಳೀಯ ಶಾಪ್ಗಳು ಸೇಇದಂತೆ 25,00ಕ್ಕೂ ಅಧಿಕ ಪಟ್ಟಣಗಳು, ನಗರಗಳಲ್ಲಿ ಅಸ್ತಿತ್ವ ಹೊಂದಿದೆ. ಸಂಭ್ರಮಾಚರಣೆಯು ಬೆಂಗಳೂರಿನ ಜೆ.ಡಬ್ಲ್ಯೂ.ಮಾರಿಯೊಟ್ನಲ್ಲಿ ನಡೆದಿದ್ದು, ನಂತರ ಟಾಟಾ ಸ್ಕೈ ವಿತರಕರ ಸಭೆಯು ಅದೇ ಸ್ಥಳದಲ್ಲಿ ನಡೆಯಿತು. ಬ್ರಾಂಡ್ ಪ್ರಗತಿಗೆ ನೀಡಿದ ನೆರವಿಗಾಗಿ ವಿತರಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಸ್ಕೈನ ಚೀಫ್ ಸೇಲ್ಸ್ ಆಫೀಸರ್ ಸಲೀಪ್ ಶೇಖ್, `ಕರ್ನಾಟಕದಲ್ಲಿ ದೊರೆತೆ ಅತೀವ ಪ್ರತಿಕ್ರಿಯೆಯಿಂದಾಗಿ ನಮಗೆ ಸಂತಸವಾಗಿದೆ. ಇದು, ಗ್ರಾಹಕರು ನಮ್ಮ ಸೇವೆಯ ಮೇಲೆ ಇಟ್ಟಿರುವ ವಿಶ್ವಾಸ ತೋರಿಸಲಿದೆ. ಕಳೆದ ನಾಲ್ಕು ತಿಂಗಳಲ್ಲಿ, ನನ್ನ 99 ಆರಂಭದ ನಂತರ ಸಾಕಷ್ಟು ಪ್ರಗತಿ ಕಂಡಿದ್ದು, ಗ್ರಾಮೀಣ ಮಾರುಕಟ್ಟೆಯಲ್ಲಿ ಶೇ 40 ಪ್ರಗತಿ ಕಂಡಿದೆ. ಜೊತೆಗೆ ನಗರ ಪ್ರದೇಶಗಳಲ್ಲಿಯೂ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ನನ್ನ 99 ಪ್ಯಾಕ್ನ ಆರಂಭ ಮತ್ತು ಸುದೀಪ್ ಅವರ ಸಹಭಾಗಿತ್ವದೊಂದಿಗೆ ಕರ್ನಾಟಕದಲ್ಲಿ ತನ್ನಅಸ್ತಿತ್ವವನ್ನು ಇನ್ನಷ್ಟು ದೃಢಪಡಿಸಿಕೊಳ್ಳಲಾಗುತ್ತಿದೆ ಎಂದರು.
ಸೂಪರ್ಸ್ಟಾರ್ ಸುದೀಪ್ ಈ ಸಂದರ್ಭದಲ್ಲಿ ಮಾತನಾಡಿ, `’ಟಾಟಾ ಸ್ಕೈ ಯಶಸ್ಸಿನಿಂದ ನನಗೆ ಸಂತಸವಾಗಿದೆ. ಇದು, ಮನರಂಜನೆಗೆ ಹೊಸ ವ್ಯಾಖ್ಯಾನ ಬರೆದ ಬ್ರಾಂಡ್ ಆಗಿದೆ.ಇದು, ತಾಂತ್ರಿಕವಾಗಿ ಎಂದಿಗೂ ಒಂದು ಹೆಜ್ಜೆ ಮುಂದಿದೆ. ನನಗೆ ಬ್ರಾಂಡ್ ಜೊತೆಗೆ ಕೈಜೋಡಿಸಲು ಸಂತಸವಾಗಿದೆ’ ಎಂದರು.