ಮನೋರಂಜನೆ

ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಕಿಚ್ಚ ಸುದೀಪ್ !

Pinterest LinkedIn Tumblr

kiccha_prem

ಬೆಂಗಳೂರು: ನಟಿ,ನಿರ್ಮಾಪಕಿ ರಕ್ಷಿತಾ ಹಲವು ಬಾರೀ ತಮ್ಮ ಪತಿ, ನಿರ್ದೇಶಕ ಪ್ರೇಮ್ ಹಾಗೂ ಚಿತ್ರರಂಗದ ಆಪ್ತಸ್ನೇಹಿತ ಕಿಚ್ಚ ಸುದೀಪ್ ಅವರ ಜೊತೆಗೆ ಸಿನಿಮಾ ಮಾಡಲು ಪ್ರಯತ್ನಿಸಿದ್ದರಾದರೂ ರಕ್ಷಿತಾ ವಿಫಲವಾಗಿದ್ದರು. ಈಗ ಆ ಕಾಲ ಕೂಡಿಬಂದಿರುವ ಲಕ್ಷಣಗಳು ಸ್ಯಾಂಡಲ್‍ವುಡ್‍ನಲ್ಲಿ ಕಾಣುತ್ತಿವೆ.

ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಹಾಗೂ ಪ್ರೇಮ್ ವಿಭಿನ್ನ ಯೋಚನೆ, ತಮ್ಮದೇ ಆದ ಸ್ಟೈಲ್ ಹೊಂದಿದ್ದಾರೆ. ಈ ಕಾರಣಕ್ಕೆ ಇವರಿಬ್ಬರು ಒಂದಾದರೇ ಉತ್ತಮ ಚಿತ್ರ ಸೃಷ್ಟಿಯಾಗುತ್ತದೆ ಎನ್ನುವುದು ರಕ್ಷಿತಾ ಅಭಿಪ್ರಾಯವಾಗಿದೆ. ಸದ್ಯ ಈ ಇಬ್ಬರು ಸ್ಟಾರ್‍ಗಳು ಒಂದು ಪ್ರಾಜೆಕ್ಟ್‍ಗೆ ಕೈಹಾಕಿದ್ದಾರೆ ಎನ್ನುವ ಸುದ್ದಿಗಳು ಹಬ್ಬಿದೆ.

ಒಂದೆಡೆ ಸುದೀಪ್ ಅವರು ಕೆಎಸ್ ರವಿಕುಮಾರ್ ಜೊತೆಗೆ ದ್ವಿಭಾಷಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಪ್ರೇಮ್ ಕೂಡ ವಿನಯ್‍ರಾಜ್‍ಕುಮಾರ್ ಜೊತೆಗೆ ಬ್ಯುಸಿಯಾಗಿದ್ದಾರೆ. ಮಾಹಿತಿ ಪ್ರಕಾರ ನಿರ್ಮಾಪಕ ಸಿಆರ್ ಮನೋಹರ್ ಹಾಗೂ ಪ್ರೇಮ್ ಸೇರಿಕೊಂಡು (ಕನ್ನಡ, ತೆಲುಗು, ತಮಿಳು) ತ್ರಿಭಾಷಾ ಚಿತ್ರ ಮಾಡುತ್ತಿದ್ದು, ಇದರ ಕನ್ನಡ ಅವತರಿಣಿಕೆಯಲ್ಲಿ ಸುದೀಪ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾದ ಮಾಹಿತಿ ಬಹಿರಂಗ ಪಡಿಸುವವರೆಗೂ ಕಾಯಲೇ ಬೇಕಾಗಿದೆ.

Write A Comment