ಮನೋರಂಜನೆ

ಫೋರ್ಬ್ಸ್: ಜಗತ್ತಿನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ತಾರೆಯರ ಪಟ್ಟಿ: ಸಲ್ಮಾನ್,ಅಮಿತಾಭ್, ಅಕ್ಷಯ್ ಕುಮಾರ್ ಮುಂಚೂಣಿಯಲ್ಲಿ

Pinterest LinkedIn Tumblr

amitabh-akshay-salman

ನ್ಯೂಯಾರ್ಕ್, ಆ.5: ಜಗತ್ತಿನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿರುವ ಮೊದಲ ಹತ್ತು ಮಂದಿಯ ಪಟ್ಟಿಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಮುಂಚೂಣಿಯಲ್ಲಿದ್ದಾರೆ.

ಈ ಮೂವರು ಭಾರತೀಯ ಚಿತ್ರತಾರೆ ಯರು ಹಾಲಿವುಡ್ ದಂತಕಥೆ ಗಳೆನಿಸಿರುವ ಡಾಯ್ನ ‘ದಿ ರಾಕ್’ ಜಾನ್ಸನ್ ಹಾಗೂ ಜಾನಿ ಡಿಪ್‌ರನ್ನು ಸಂಭಾವನೆ ಪಡೆಯುವಲ್ಲಿ ಹಿಂದಿಕ್ಕಿದ್ದಾರೆ.

ಫೋರ್ಬ್ಸ್ ನಿಯತಕಾಲಿಕವು ಸಿದ್ಧಪಡಿಸಿರುವ ಅತ್ಯಧಿಕ ಸಂಭಾವನೆ ಪಡೆದ 34 ಮಂದಿ ಜಾಗತಿಕ ಚಿತ್ರತಾರೆಯರ ಪಟ್ಟಿಯಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ರಣ್‌ಬೀರ್ ಕಪೂರ್ ಕೂಡಾ ಒಳಗೊಂಡಿದ್ದಾರೆ.
ಫೋಬ್ಸ್ ಸಿದ್ಧಪಡಿಸಿರುವ ಈ ಪಟ್ಟಿಯಲ್ಲಿ 12 ಮಂದಿ ಹೊಸಬರು ಸ್ಥಾನ ಗಳಿಸಿದ್ದರೆ, ಭಾರತವೊಂದರಿಂದಲೇ ಐವರು ತಾರೆಯರು ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ.

ಅಮಿತಾಭ್‌ಬಚ್ಚನ್ ಹಾಗೂ ಸಲ್ಮಾನ್ ಖಾನ್ ತಲಾ 33.5 ದಶಲಕ್ಷ ಡಾಲರ್ ಸಂಭಾವನೆ ಪಡೆಯುವ ಮೂಲಕ ಏಳನೆ ಸ್ಥಾನ ದಲ್ಲಿದ್ದು, ಅಮೆರಿಕನ್ ನಟ ಕ್ರಿಸ್ ಪ್ರಾಟ್ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ‘ಗಾನ್ ಗರ್ಲ್’ ಚಿತ್ರದ ನಟ ಬೆನ್ ಅಫ್ಲೆಕ್ ಪಡೆದ ಒಟ್ಟು ಸಂಭಾವನೆಗಿಂತಲೂ ಅಧಿಕ ಮೊತ್ತವನ್ನು ಸಂಪಾದಿಸಿದ್ದಾರೆ.

ಬಾಲಿವುಡ್‌ನ ಬಿಡುವಿಲ್ಲದ ವ್ಯಕ್ತಿಗಳಲ್ಲೋರ್ವರಾದ ಅಕ್ಷಯ್ ಕುಮಾರ್ 32.5 ದಶಲಕ್ಷ ಡಾಲರ್ ಪಡೆದಿದ್ದು, ಪಟ್ಟಿಯಲ್ಲಿ 9ನೆ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಓರ್ವರು ಪಡೆದಿರುವ ಮೊತ್ತವು ಒಂದೇ ಅವಧಿಯಲ್ಲಿ ಹಾಲಿವುಡ್ ನಟರಾದ ಜಾರ್ಜ್ ಕ್ಲೂನಿ ಹಾಗೂ ಬ್ರಾಡ್ ಪಿಟ್ ಪಡೆದಿರುವ ಒಟ್ಟು ಸಂಭಾವನೆಗಿಂತಲೂ ಅಧಿಕವಾಗಿದೆ ಎಂದು ‘ಫೋರ್ಬ್ಸ್’ ವರದಿ ಮಾಡಿದೆ.

ಶಾರುಖ್‌ರನ್ನು ‘ಇಂಡಿಯಾಸ್ ಲಿಯನಾರ್ಡೊ ಡಿ ಕ್ಯಾಪ್ರಿಯೊ’ ಎಂದು ಬಣ್ಣಿಸಿರುವ ಫೋರ್ಬ್ಸ್ ಅವರಿಗೆ ಪಟ್ಟಿಯಲ್ಲಿ 18ನೆ ಸ್ಥಾನ ನೀಡಿದೆ. ಅವರ ಸಂಭಾವನೆಯ ಮೊತ್ತ 26 ದಶಲಕ್ಷ ಡಾಲರ್‌ಗಳಾಗಿವೆ.

15 ದಶಲಕ್ಷ ಡಾಲರ್ ಸಂಭಾವನೆ ಪಡೆದಿರುವ ರಣಬೀರ್ ಕಪೂರ್ 30ನೆ ಸ್ಥಾನ ಪಡೆದಿದ್ದಾರೆ.
2014ರ ಜೂನ್ 1 ಹಾಗೂ 2015ರ ಜೂನ್ 1ರ ನಡುವಿನ ಅವಧಿಯಲ್ಲಿ ನಟರು ಪಡೆದಿರುವ ಸಂಭಾವನೆಯ ಮೊತ್ತವನ್ನು ಆಧರಿಸಿ ಫೋರ್ಬ್ಸ್ ಈ ಪಟ್ಟಿಯನ್ನು ಸಿದ್ಧಪಡಿಸಿದೆ.

Write A Comment