ಮನೋರಂಜನೆ

ಅಬ್ದುಲ್ ಕಲಾಂ ಬಗ್ಗೆ ತಪ್ಪಾಗಿ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಅನುಷ್ಕಾ ಶರ್ಮಾ !

Pinterest LinkedIn Tumblr

anushka

ಮುಂಬೈ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರಣ್ ಜೋಹರ್ ಕೇಳಿದ ಜನರಲ್ ನಾಲೆಡ್ಜ್ ಪ್ರಶ್ನೆಗಳಿಗೆ ತಪ್ಪು ತಪ್ಪಾಗಿ ಉತ್ತರಕೊಟ್ಟು ಬಾಲಿವುಡ್ ನಟಿ ಆಲಿಯಾ ಭಟ್ ಸಾಮಾಜಿಕ ತಾಣಗಳಲ್ಲಿ ನಗೆಪಾಟಲಿಗೀಡಾಗಿದ್ದು ಎಲ್ಲರಿಗೂ ನೆನಪಿದೆ. ಆದರೆ ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ.

ಅನುಷ್ಕಾ ಶರ್ಮಾಳ ಪೆದ್ದುತನವೀಗ ಸೋಷ್ಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ. ಅದೇನಪ್ಪಾ ಅಂದ್ರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನಕ್ಕೆ ಕಂಬನಿ ಮಿಡಿದು ಅನುಷ್ಕಾ ಶರ್ಮಾ ಟ್ವಿಟರ್‌ನಲ್ಲಿ ಶ್ರದ್ಧಾಂಜಲಿ ಟ್ವೀಟ್ ಮಾಡಿದ್ದಾಳೆ. ಹೀಗೆ ಶ್ರದ್ದಾಂಜಲಿ ಟ್ವೀಟ್ ಟೈಪ್ ಮಾಡಿದಾಗ ಅದರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಎಬಿಜೆ ಕಲಾಂ ಆಜಾದ್ ಎಂದು ಟೈಪ್ ಮಾಡಿದ್ದಾಳೆ.

ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಎಬಿಜೆ ಕಲಾಂ ಅಜಾದ್ ಎಂದು ಟೈಪಿಸಿ ಶ್ರದ್ಧಾಂಜಲಿ ಅರ್ಪಿಸಿರುವ ಅನುಷ್ಕಾ ಟ್ವೀಟ್‌ಗೆ ನೆಟಿಜನ್‌ಗಳಿಂದ ಯದ್ವಾತದ್ವ ಟೀಕಾಪ್ರಹಾರಗಳು ನಡೆದವು. ಅಷ್ಟರಲ್ಲಿ ಅನುಷ್ಕಾ ತನ್ನ ಟ್ವೀಟ್‌ನ್ನು ಡಿಲೀಟ್ ಮಾಡಿ ಇನ್ನೊಂದು ಟ್ವೀಟ್ ಪೋಸ್ಟ್ ಮಾಡಿದಳು.

ಅದರಲ್ಲಿ ಎಬಿಜೆ ಇದ್ದದ್ದು ಎಪಿಜೆ ಆಗಿದ್ದರೂ ಕಲಾಂ ಹೆಸರನ್ನು ಮತ್ತೆ ಎಪಿಜೆ ಕಲಾಂ ಆಜಾದ್ ಎಂದು ಬರೆಯಲಾಗಿತ್ತು. ಮತ್ತೆ ಟ್ವಿಟರ್ ನಲ್ಲಿ ಟೀಕಾ ಪ್ರಹಾರವಾದಾಗ ಮೂರನೇ ಬಾರಿ ಅನುಷ್ಕಾ ಎಪಿಜೆ ಅಬ್ದುಲ್ ಕಲಾಂ ಎಂದು ಸರಿಯಾಗಿ ಬರೆದು ಟ್ವೀಟ್ ಮಾಡಿದಳು.

ಮೂರನೇ ಬಾರಿ ಸರಿಯಾಗಿ ಹೆಸರು ಬರೆದಿದ್ದೀ..ಇದಕ್ಕೆ ಕಂಗ್ರಾಟ್ಸ್ ಎನ್ನುವ ಟ್ವೀಟ್‌ಗಳೂ, ನೀನು ವಿರಾಟ್ ಕೊಹ್ಲಿಯನ್ನು ನೋಡಿಕೊಂಡರಷ್ಟೇ ಸಾಕು. ದೊಡ್ಡ ಡೊಡ್ಡ ವಿಷ್ಯಗಳನ್ನು ಮಾತನಾಡಬೇಡ ಎಂಬ ಪ್ರತಿಕ್ರಿಯೆಗಳು ಅನುಷ್ಕಾಳಿಗೆ ಸಿಕ್ಕಿತು. ಸಾಮಾಜಿಕ ತಾಣದಲ್ಲೀಗ ಅನುಷ್ಕಾ ಶರ್ಮಾಳ ಸ್ಪೆಲ್ಲಿಂಗ್ ಮಿಸ್ಟೇಕ್ ಟ್ವೀಟ್‌ನದ್ದೇ ಸುದ್ದಿ.

Write A Comment